Friday, July 15, 2016

ರಂಗಾವತರಣ

ರಂಗಾವತರಣ
ಬಹಿರ್ನಟನೆಯ ಅನಾವರಣ,
ಅಂತರ್ನಟನೆಯ ಅವಲೋಕಿತ ವಿಸ್ತರಣ,
ಮಿಥ್ಯವ ಸತ್ಯವಾಗಿಸಿ ತೋರಿ,
ನಾಳಿನ ಸತ್ಯಕೆ ದೀಪದ ಹೊಂಗಿರಣ!
ರಂಗಾವತರಣ, ಇದು ರಂಗಾವತರಣ!
ನಿರ್ದೇಶಕನ ಕನಸಿನ ರಂಗ ಪ್ರತಿಷ್ಠಾಪನ,
ಕಥಾದೇವಿಗೆ ಲಲಿತ-ಕಲಾದೇವಿಯ ಅಲಂಕರಣ,
ಭವ್ಯರಂಗಸಜ್ಜಿಕೆಯಲಿ, ಕತ್ತಲು-ಬೆಳಕಿನಾಟದಲಿ,
ಪರಿಕರಗಳ ಜೊತೆಯಾಡುತ, ಸೂತ್ರಧಾರ-ಪಾತ್ರಧಾರಿಯ ನವರಸ ಸಮೀಕರಣ!
ರಂಗಾವತರಣ, ಇದು ರಂಗಾವತರಣ!
ಅನಂತ ಇತಹಾಸದ ಜೀವಂತ ಕಲೆಯ,
ಪ್ರೇಕ್ಷಕ ಪ್ರಭುವಿನ ಪ್ರತ್ಯಕ್ಷ ಧಾರಣ,
ನವಸಮಾಜದ ನಿರ್ಮಾಣಕೆ,
ನಾಂದಿಯ ಬ್ರಹ್ಮಾರ್ಪಣ!
ರಂಗಾವತರಣ, ಇದು ರಂಗಾವತರಣ!
- ಮಂಜುನಾಥ ಚನ್ನವೀರಪ್ಪ
ವಿಶ್ವರಂಗಭೂಮಿ ದಿನದ ನಿಮಿತ್ತ - ಕೊಂಚ ತಡವಾಗಿ ಅರ್ಪಣೆ.