Monday, May 8, 2017

ರಂಗಾಹ್ವಾನ

ಪೀಠಿಕೆ:
ಸುಮ್ನೆ ಆಗೊಂದು ಈಗೊಂದು ಕವನ ಬರೀತಾ ಇದ್ದೋನ್ಗೆ, 'ರಂಗ ಅಧ್ಯಯನ' ಅನ್ನೋ ತಂಡ ಕಟ್ಟಿ ರಂಗಾಯಣದ 'ಜಯರಾಮ್ ತಾತಾಚಾರ್' ಅವರನ್ನ ನಾವು ಕೆಲಸ ಮಾಡ್ತಾ ಇದ್ದ ಮೈಸೂರು ಆಫೀಸ್ಗೆ ಕರಕೊಂಡು ಬಂದು ನಮಗೆ ಪ್ರಥಮ ರಂಗ ತರಬೇತಿ ಕೊಡಿಸಿದ್ದು ಭವ್ಯ ಮಂಜುನಾಥ್ ಮತ್ತು ಇದಕ್ಕೆ ಅನುವು ಮಾಡಿಕೊಟ್ಟವರು ಗುರು ಪ್ರಸಾದ್ ಮತ್ತು ಇತರ ಬಳಗದ ಸದಸ್ಯರು. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಆಗಾಗ ಆಫೀಸಲ್ಲಿ ಸಿಕ್ತಾ ಇದ್ದ ನನ್ನ ಹಳೇ ಪಿ.ಯು. ಸಹಪಾಠಿ ರಂಗರಾಜ್ ಕೂಡ ನಾಟಕಗಳಲ್ಲಿ ಅಭಿನಯಿಸ್ತಾರೆ ಅಂತ ಗೊತ್ತಾಗಿದ್ದು ತುಂಬಾ ತಡವಾಗಿ. ಸುಮಾರು ಸಲ ಮಾಗಡಿ ಡೇಸ್ ಪೋಸ್ಟರ್ ನೋಡಿದ್ದ ನನಗೆ ಇದು ರಂಗರಾಜೇ ಅಂತ ಕನ್ಫರ್ಮಾಗೋಕೆ ಸ್ವಲ್ಪ ಸಮಯ ಹಿಡೀತು. ಇದೆಲ್ಲದರ ನಡುವೆ ಮೈಸೂರಿನ ನಮ್ಮ ಗೆಳೆಯರ ಗುಂಪಿನ ರಂಗಮಂಚವನ್ನೇರೋ ಕನಸು ಕೊನೆಗೂ ಮೈಸೂರಲ್ಲಿ  ನನಸಾಗಲಿಲ್ಲ.
                 ನಾನು ಆಮೇಲೆ ಬೆಂಗಳೂರಿಗೆ ವರ್ಗ ಆಗಿ ಬಂದು, ಆಫೀಸು ಮನೆ ಅಂತ ಸುತ್ತಾಡ್ತಿರ್ಬೇಕಾದ್ರೆ ಆಗಾಗ ರಂಗನ ವಾಟ್ಸಾಪ್ ಸಂದೇಶಗಳು ನನಗೆ ಬರ್ತಾ ಇರ್ತ ಇದ್ವು. ಅದರಲ್ಲಿ ಒಂದು ದಿನ ನನಗೆ ಬಂದ ಸಂದೇಶ - BigStep - Workshop by Wemove (http://www.wemovetheatre.in/). ಅಲ್ಲಿಂದ ಶುರುವಾಯ್ತು ನೋಡಿ ನನ್ನ ನಾಟಕದ ಹುಚ್ಚು, ಆಮೇಲೆ E=MC2 ನೋಡ್ದೆ, BigStep - 2 ಸೇರಿಕೊಂಡೆ.

ವಿಮೂವ್ ನವರು ನಮಗೊಂದು ಮಾತು ಕೊಟ್ಟಿದ್ರು - ಅದೇನಪ್ಪ ಅಂದ್ರೆ BigStep - 2ರ ಅಭ್ಯರ್ಥಿಗಳಿಗೆ ತರಬೇತಿಯ ಅಂಗವಾಗಿ ಒಂದು ನಾಟಕವನ್ನಾದರೂ ರಂಗದ ಮೇಲೆ ಮಾಡಿಸೋದು ಅವರ ಜವಾಬ್ದಾರಿ ಆಗಿತ್ತು. ಅವರ ಮಾತಿನಂತೆ 'ಬೇಡಾಂದ್ರು ಮದ್ವೆ' ಪ್ರಥಮ ಪ್ರದರ್ಶನ ಡಿಸೆಂಬರ್ 27 2015ಕ್ಕೆ ರಂಗಸ್ಥಳದಲ್ಲಿ ನಡೀತು. ಅದಾದ ಒಂದೇ ವಾರದಲ್ಲಿ ಮತ್ತೆ ನಮ್ಮ ತಂಡದವರು ಸಿಂಧುಗೆ ಅರ್ಜಿ ಹಾಕಿದ್ವಿ. ಅವ್ರು, ಅಭಿಷೇಕ್ ಮತ್ತೆ ರಂಗರಾಜ್ ಜೊತೆ ಮಾತಾಡಿ ಎರಡನೇ ಪ್ರದರ್ಶನಕ್ಕೆ ಎಲ್ರೂ ಸಂತೋಷದಿಂದ ಒಪ್ಪಿದ್ದಾರೆ ಅಂತ ತಿಳ್ಸಿದ್ರು. ಎರಡನೇ ಪ್ರದರ್ಶನಕ್ಕೆ ನಮಗೆ ಹೆಚ್ಚು ಕಷ್ಟ ಅಂತ ಯಾವುದೂ ಅನ್ನಿಸ್ಲಿಲ್ಲ. ಆದ್ರೆ ಮೊದಲನೇ ಪ್ರದರ್ಶನಕ್ಕೆ ಬಂದ ಹಾಗೆ ಎರಡನೇ ಪ್ರದರ್ಶನಕ್ಕೂ ಜನ ಬರ್ತಾರಾ ಅನ್ನೋದು ಪ್ರಶ್ನೆಯಾಗಿತ್ತು! ಶೋ ದಿನ ಹತ್ತಿರ ಬರ್ತಿದ್ ಹಾಗೆ ಹೆಚ್ಗೆ ಟಿಕೆಟ್ ಬುಕಿಂಗ್ ಆಗ್ದೇ ಇದ್ದಿದ್ ನೋಡಿ - ಅಭಿಷೇಕ್ ಮತ್ತೆ ಸಿಂಧು ನಮ್ಗೆ ಕ್ಲಾಸ್ ತಗೊಂಡ್ರು - ಇಲ್ಲಿ ಅವ್ರಿಗೆ ಆತಂಕ ಇದ್ದಿದ್ದು, ನಾಟಕಕ್ಕೆ ಹೆಚ್ಗೆ ಜನ ಬರ್ಲಿಲ್ಲ ಅಂದ್ರೆ, ನಮ್ಮ ಪ್ರದರ್ಶನ ಶಕ್ತಿ ಹೀನವಾಗಿ ಕಳಪೆಯಾಗ್ಬಹುದು ಅಂತ.
    ಈ ಒಂದು ಸಲಹೆಯೇ ನನಗೆ ವರ ಆಯ್ತು. ಅವತ್ತೇ ನಾನು ನಮ್ಮ ಸಂಸ್ಥೆಯಲ್ಲೇ ಕೆಲ್ಸ ಮಾಡ್ತಿದ್ದ, ಕನ್ನಡ ಸಂಘ - ಸಿರಿಗಂಧದ ಮುಖಂಡರಾದಂತಹ ರಾಮಚಂದ್ರರವರನ್ನ ಭೇಟಿಯಾಗಿ ನಾಟಕಕ್ಕೆ ಬರೋದಕ್ಕೆ ಆಹ್ವಾನ ಕೊಟ್ಟೆ. ಅದೇ ಭೇಟಿಯಲ್ಲೇ ಅವ್ರು ಮಾರ್ಚ್ 17ಕ್ಕೆ ಪ್ರತಿವರ್ಷ ತಪ್ಪದೇ ಹಾಜರಿಯಾಗ್ತಿದ್ದಂತ ಡಿ.ವಿ.ಗುಂಡಪ್ಪನವರ ಜಯಂತಿಗೆ ನನಗೆ ಆಹ್ವಾನವನ್ನ ಕೊಟ್ರು. ಇವೆರಡರ ನಡುವಿನ ಜುಗಲ್ಬಂದಿಯಲ್ಲಿ ನನಗೆ ನಾಟಕದ ಪ್ರಚಾರಕ್ಕೆ ಮತ್ತೆ ನನ್ನ ಅನಿಸಿಕೆಗಳನ್ನ ಪ್ರಪಂಚದ ಜೊತೆ ಹಂಚಿಕೊಳ್ಳೋದಕ್ಕೆ ಒಂದು ಮಾಧ್ಯಮವನ್ನ ಹುಡುಕ್ತಾ ಇದ್ದೆ. ಆ ಮಾಧ್ಯಮ ಅದಾಗ್ಲೇ ಕಣ್ಮುಂದೆ ಇತ್ತು - ಅದೇ ಸಂಭಾಷಣೆ! ಇಲ್ಲಿ ಸಕಾರಾತ್ಮಕ ಮತ್ತೆ ನಕಾರಾತ್ಮಕ ಭಾವನೆಗಳೆರಡನ್ನೂ ವ್ಯಕ್ತಪಡಿಸೋ ಅವಕಾಶ ಅದಾಗದೇ ತೆರೆದುಕೊಂಡಿದ್ದು ಗುಂಡ ಮತ್ತು ತಿಮ್ಮರ ಮೂಲಕ. ಈ ಗುಂಡ ಮತ್ತು ತಿಮ್ಮ ಅದಾಗಲೇ ನಿಮಗೆ ಪರಿಚಯ ಆಗಿರುವಂತಹ ಯಾವುದೋ ಹಾಸ್ಯದ ತುಣುಕಿನ ಪಾತ್ರಗಳಂತೂ ಖಂಡಿತ ಅಲ್ಲ! ಇಲ್ಲಿ ಬರುವ ಗುಂಡ ಸಕಾರಾತ್ಮಕ ವ್ಯಕ್ತಿ - ಈತ ಸಾಕ್ಷಾತ್ ಡಿ.ವಿ.ಗುಂಡಪ್ಪನವರೇ ಆಗಿರಬಹುದು ಅಥವಾ 'ಬೇಡಾಂದ್ರು ಮದ್ವೆ' ಬರೆದಂತಹ ಕೆ.ಗುಂಡಣ್ಣನವರಾಗಿರಬಹುದು. ಮತ್ತೆ ತಿಮ್ಮ ಒಬ್ಬ ನಕಾರಾತ್ಮಕ ವ್ಯಕ್ತಿ - ಈತ ಡಿ.ವಿ.ಜಿ.ಯವರು ಅಂದುಕೊಂಡ ಮಂಕುತಿಮ್ಮನೇ ಆಗಿರಬಹುದು ಅಥವಾ ಇನ್ನಾರಾದರೂ ಆಗಿರಬಹುದು. ಆದರೆ ಈ ಪಾತ್ರಗಳು ಹುಟ್ಟಿದ್ದಂತೂ ಇವರ ಪ್ರೇರಣೆಯಿಂದಲೇ.
     ಮುಂದಿನ ಕಥೆ ಒಂದಲ್ಲ ಒಂದು ಸಂದರ್ಭದಲ್ಲಿ ಮುಂದೆ ಬರೆದಿರೋ ಸಂಭಾಷಣೆಗಳಲ್ಲಿ ತೆರೆದುಕೊಳ್ತಾ ಹೋಗುತ್ತೆ. ನೀವು ಕೂಡ ತೆರೆದ ಮನಸ್ಸಿನಿಂದ ಓದಿ ರಂಗಕ್ಕೆ ಬನ್ನಿ ಅಂತ ನನ್ನ - ರಂಗಾಹ್ವಾನ. ಆಮೇಲೆ ಈ ಸಂಭಾಷಣೆಗಳಿಗೆ ಕೊನೆ ಅನ್ನೋದಂತೂ ಇರಲ್ಲ!
March1-2016:
ಗುಂಡ: ಲೇ ತಿಮ್ಮ, ಬಾರೋ ಈ ಶನಿವಾರ ಗುಂಡಣ್ಣನೋರ್ ನಾಟಕ ನೋಡೋಕ್ ಹೋಗೋಣ.
ತಿಮ್ಮ: ಲೇ ಗುಂಡ, ಈ ತಿಮ್ಮನ್ನ ಮಂಕುತಿಮ್ಮನ್ ಮಾಡಿ, ಪ್ರಪಂಚಕ್ಕೇ ವೇದಾಂತ ಹೇಳ್ಕೊಟ್ಟ ಗುಂಡಪ್ಪನೋರ್ ದಿನಾಚರಣೆ ಇದೇ ಮಾರ್ಚ 17ಕ್ಕಿದೆ. ಅದಕ್ಕೇನೆ ನಾನ್ ಹೋಗ್ತಾ ಇಲ್ಲ. ಇನ್ನ, ನೀನ್ ಕರೀತಾ ಇರೋ ಗುಂಡಣ್ಣನೋರ್ 'ಬೇಡಾಂದ್ರೂ ಮದ್ವೆ'ಗ್ ಬರ್ತೀನೇನೊ ನಾನು...
ಗುಂಡ: ಗುಂಡಪ್ಪನೋರ್ ಹೇಳಿರೋ ಬುದ್ಧಿ ಮಾತೇ ನಿನ್ ಮಂಕುಬುದ್ಧೀನ ಇನ್ನೂ ಚುರ್ಕ್ ಮಾಡಿಲ್ಲ, ಇನ್ನ ನಾಟಕ ನೋಡೋಕ್ ಎಲ್ ಬರ್ತೀಯ ನೀನು. ನಾಟಕದಂಥ ಜೀವಂತ ಕಲೇನ್ ಆಸ್ವಾದಿಸೋ ಅದೃಷ್ಟ ನಿನಗ್ ಎಲ್ಲಿಂದ ಬರ್ಬೇಕು!
=================================================================================
ತಿಮ್ಮ: ಅಲ್ವೊ ಗುಂಡ, ಇರೋ ಬರೋ ಕೆಲ್ಸ ಎಲ್ಲಾ ಬಿಟ್ಟು, ಬೇಡಾಂದ್ರು ಮದ್ವೆಗ್ ಯಾಕೋ ಹೋಗ್ಬೇಕು?
ಗುಂಡ: ಬೇಡಾಂದ್ರು ಮದ್ವೆ ಮಂದಿ ಎಲ್ರೂನೂ ಒಂದಲ್ಲ ಒಂದ್ ಕಡೆ ಕೆಲ್ಸ ಮಾಡ್ತಾ ಇರೋರೆ ಕಣ್ಲ, ತಿಮ್ಮ. ಏನೋ ತಮ್ಮ ಬಿಡುವಿಲ್ಲದ ಕೆಲ್ಸಗಳ್ ಮಧ್ಯೇನೂ ಬಿಡುವು ಮಾಡ್ಕೊಂಡು ನಾಟಕ ಆಡ್ತಾ ಅವ್ರೆ. ಹೋಗಿ ನೋಡ್ದ್ರೇನೇ ಅಲ್ವ ಅವ್ರ ಬೇಳೆ ಕಾಳು ಎಷ್ಟ್ ಬೆಂದಿದೆ ಅಂತಾ ಗೊತ್ತಾಗೋದು. ಅವ್ರ್ ಪಟ್ಟ ಪಾಡಿಗೂ ಒಂದ್ ಬೆಲೆ ಅಂತ ಸಿಗೋದು. ನೀನ್ ಏನೇ ಹೇಳ್ಲಾ ಕಣೋ ತಿಮ್ಮ, ನಾನಂತೂ ಈ ನಾಟ್ಕನಾ ಹೋಗಿ ನೋಡೋದೇಯಾ!
=================================================================================
March3-2016:
ತಿಮ್ಮ: ಅಲ್ಲಾ ಕಣೋ ಗುಂಡ, ಕನ್ನಡದಲ್ಲಿ 2 ತಿಂಗಳಲ್ಲಿ 32 ಸಿನಿಮಾ ರಿಲೀಸಾಗಿ, ಅದ್ರಲ್ಲಿ ಸುಮಾರನ್ನ ಒಂದ್ ವಾರ ತುಂಬೋದಕ್ ಮುಂಚೇನೆ ತೆಗೆದ್ ಬಿಟ್ರಂತೆ. ಇಂಥ ಸಂದರ್ಭದಲ್ಲಿ 'ಬೇಡಾಂದ್ರು ಮದ್ವೆ' ನಾಟಕ ನೋಡಿ ಯಾಕ್ ಕಾಲ ಕಳೆಯೋದು? ಯಾವುದಾದ್ರು ಸಿನಿಮಾಗೇ ಹೋಗ್ಬೋದಲ್ವ?
ಗುಂಡ: ಲೇ ತಿಮ್ಮ, ಅಲ್ಲೇ ನಾವೆಲ್ಲ ಎಡವತಾ ಇರೋದು! ನೀನು ಸಿನಿಮಾ ನೋಡ್ಬೇಡ ಅಂತ ನಾನ್ ಹೇಳ್ತಾ ಇಲ್ಲ. ಅದೂ ಕೂಡ ಕಲೆಯನ್ನ ಎಲ್ಲರಿಗೂ ತಲುಪಿಸೋ ಒಂದು ಮಾಧ್ಯಮ, ಅದಕ್ಕೆ ಸಲ್ಲಿಸಬೇಕಾದ ಗೌರವ ಸಲ್ಲಿಸು. ಆದರೆ, ನಾಟಕ ಅನ್ನೋದು ನಾನು ಮೊದಲೇ ಹೇಳಿದ ಹಾಗೆ ಜೀವಂತ ಕಲೆ. ನಾಟಕದಲ್ಲಿ ರಿ-ಟೇಕ್ ಹೇಗೆ ಇರಲ್ವೋ ಹಾಗೇನೆ ರಿ-ವೈಂಡ್ ಅನ್ನೋದ್ ಕೂಡ ಇರೋದಿಲ್ಲ. ಪ್ರತಿಯೊಂದ್ ಪ್ರದರ್ಶನನೂ ಕೂಡ ಒಂದು ಇತಿಹಾಸವನ್ನ ಕಲಾವಿದರು, ಸಭಾಸದರಿಗಷ್ಟೇ ಅಲ್ಲದೆ ನಾಟಕ ನಡೆಸೋರ್ಗೂ ಮತ್ತೆ ರಂಗಮಂದಿರದವರಿಗೂ ನಿರ್ಮಿಸಿಕೊಡುತ್ತೆ. ನೀನು ಈ ಇತಿಹಾಸದ ಒಂದ್ ಭಾಗ ಆಗ್ತೀಯೋ ಅಥವಾ ಇತಿಹಾಸವನ್ನ ನೋಡ್ತಾ ಕೂರ್ತೀಯೋ? ನೀನೇ ತೀರ್ಮಾನ ಮಾಡು!
=================================================================================
March4-2016:
ತಿಮ್ಮ: ನಿನಗ್ಗೊತ್ತಾಯ್ತ ಗುಂಡ, ಬೇಡಾಂದ್ರು ಮದ್ವೆ ನೋಡೋಕೆ ಹೆಚ್ಗೆ ಜನ ಬರೋದು ಅನುಮಾನ ಅಂತ ಸುದ್ದಿ...
ಗುಂಡ: ಸಾಕ್ ನಿಲ್ಸೊ, ತಿಮ್ಮ... ನಿನಗ್ಗೊತ್ತೇನೊ?, ಒಂದ್ಸಲ ನಜರುದ್ದೀನ್ ಷಾ ನಾಟಕ ನೋಡೋಣ ಅಂತ ಮುಂಬೈನಲ್ಲಿ ಈಗ ನಮ್ಮ ಮೈಸೂರು ರಂಗಾಯಣದಲ್ಲಿರೋ ಒಬ್ರು ಹೋಗಿದ್ರಂತೆ. ಅಲ್ಲಿ ನೋಡಿದರೆ ನಾಟಕ ನೋಡೋಕೆ ಅಂತ ಬಂದಿದ್ದೋರು ಬರೇ ಐದೇ ಜನ ಅಂತೆ ಕಣ್ಲ. ಆದರೆ ನಜರುದ್ದೀನ್ ಷಾ ತಂಡದವರು, ನಾಟಕದಲ್ಲಿ ಒಂದು ಕುಂದೂ ಇಲ್ಲದಂತೆ, ತುಂಬಿದ ಸಭೆನಲ್ಲಿ ಹೇಗೆ ಪ್ರದರ್ಶನ ಕೊಡ್ತಾರೊ ಹಾಗೆ ಪೂರ್ಣ ಪ್ರಮಾಣದ ಶಕ್ತಿ ಸಾಮರ್ಥ್ಯವನ್ನ ತುಂಬಿ ನಾಟಕ ಮಾಡಿದರಂತೆ. ನಾಟಕ ನೋಡೋದಕ್ಕೆ ಹೋಗಿದ್ದವರಂತು ಪೂರ್ತಿ ದಂಗಾಗ್ಬಿಟ್ರಂತೆ, ಆ ಪ್ರದರ್ಶನ ನೋಡಿ. ಹಾಗಂತ ನೀನು ಬೇಡಾಂದ್ರು ಮದ್ವೆ ನಾಟಕಕ್ಕು ಬರದೆ ಹೋದೀಯೆ. ಇವರದಿನ್ನೂ ಇದು ಎರಡನೇ ಪ್ರದರ್ಶನ. ಈಗ ತಾನೆ ತರಬೇತಿ ಪಡೆದು ರಂಗಕ್ಕೆ ಹೆಜ್ಜೆ ಇಡ್ತಾ ಇರೋ ಕೂಸುಗಳಿವು. ನಮ್ಮಂಥವರು ಇವರಿಗೆ ಉತ್ತೇಜನ ಕೊಟ್ರೆ ಒಳ್ಳೇದು ಅನ್ನೋದ್ ನೋಡಪ್ಪ ನನ್ನ ಆಲೋಚನೆ.
ತಿಮ್ಮ: ನೀನು ಇಷ್ಟೆಲ್ಲ ಹೇಳಿದ್ಮೇಲೆ, ಇನ್ಯಾಕಪ್ಪ ತಡ, ನಿನಗೂ ಸೇರಿಸಿ ಟಿಕೆಟ್ ಬುಕ್ ಮಾಡ್ತೀನಿ, ಎಲ್ಲಿ ಆ ಲಿಂಕ್ ಕೊಡು.
ಗುಂಡ: ತಗೊಳೊ ತಿಮ್ಮ, ಪೂರ್ತಿ ವಿವರ ಇಲ್ಲಿದೆ:
'Bedaandru Madve' will be staged on 5th March, 7.00pm at Rangasthala, Rangoli Metro Art center, MG road.
Book your tickets with 20% discount athttps://www.99doing.com/bedaandrumadve with Discount Coupon code: BDRMDV20
You can also book tickets here http://tinyurl.com/jz66qgq
=================================================================================
ತಿಮ್ಮ: ಏನೋ ಗುಂಡ, ಫಿಲ್ಮಿ ಸ್ಪಿಯರ್ / 99 Doingನಲ್ಲಿ ಮೀಸಲಿಟ್ಟಿದ್ದ ಬೇಡಾಂದ್ರು ಮದ್ವೆ ಟಿಕೇಟೆಲ್ಲ ಮಾರಾಟ ಆಗೋಯ್ತಂತೆ? ಮತ್ತಿನ್ನೆಲ್ಲಿ ಸಿಗುತ್ತೊ ಟಿಕೆಟ್ಟು?
ಗುಂಡ: ಹೌದು ಕಣೊ ತಿಮ್ಮ, ನಮ್ಮ ಜನಗಳ ಕಲಾಸಕ್ತಿ ಇನ್ನೂ ಕಡಿಮೆ ಆಗಿಲ್ಲ ಅನ್ನೋದಕ್ಕೆ ಇದೇ ನೋಡಪ್ಪ ಒಂದು ಉದಾಹರಣೆ. ಇವತ್ತು ಮಧ್ಯಾಹ್ನಕ್ಕೇನೆ, ಆ ಜಾಲತಾಣದಲ್ಲಿದ್ದ ಎಲ್ಲಾ ಮೀಸಲು ಟಿಕೆಟ್ಗಳು ಭರ್ತಿಯಾದವಂತೆ. ಅದಾದನಂತರ, ವಿ ಮೂವ್ ತಂಡದವರು ಫಿಲ್ಮಿ ಸ್ಪಿಯರ್ / 99 Doingರವರ ಜೊತೆ ಮಾತಾಡಿ, ಮಿತಿಯನ್ನ ಇನ್ನೂ ೧೫ ಟಿಕೆಟ್ಗಳಿಗೆ ಏರಿಸಿದ್ದಾರಂತೆ ಕಣ್ಲ. ಅದಲ್ಲದೆ Bookmyshow ನಲ್ಲಿ ಮತ್ತೆ ರಂಗಸ್ಥಳದಲ್ಲಿ ಕೊಡೋಕೆ ಅಂತಾನೆ ಒಂದಷ್ಟು ಟಿಕೆಟ್ಗಳಿದ್ದಾವಂತೆ ಕಣ್ಲ. ಆದ್ರೂನುವೆ ಮೊದಲೇ ಟಿಕೇಟ್ ಕಾದಿರಿಸ್ಕೊಂಡ್ರೆ ಅಲ್ಲಿ ಬಂದು ಪರದಾಡೊ ಪರಿಸ್ಥಿತಿ ತಪ್ಪುತ್ತೆ ಕಣ್ ನೋಡ್ಲ!
=================================================================================
March5-2016:
ತಿಮ್ಮ: ಏನೊ ಗುಂಡ, ಮಾಮೂಲಿ ಮದ್ವೆಗೂ, ಬೇಡಾಂದ್ರೂ ಮದ್ವೆಗೂ ಏನಾದ್ರೂ ಸಂಬಂಧ ಐತಾ ಕಣ್ಲ?
ಗುಂಡ: ಇಷ್ಟ್ ದಿನಕ್ಕೂ ಇವತ್ತು ಬೇಡಾಂದ್ರು ಮದ್ವೆ ಪ್ರದರ್ಶನಕ್ಕೆ ಅಂತ ಹೋಗ್ತಾ ಇರೋ ದಿನ, ಒಳ್ಳೇ ಪ್ರಶ್ನೆ ಕೇಳಿದ್ಯ ನೋಡ್ ಕಣ್ಲ. ರಂಗಭೂಮಿಯಲ್ಲಿ ಕಲಾವಿದರ ಪಾತ್ರ ರಂಗಸಜ್ಜಿಕೆ ಮೇಲಿನ ಪಾತ್ರ ನಿರ್ವಹಣೆ ಅಲ್ಲದೇನೆ, ಕಲಾಸಕ್ತರನ್ನ ಗುರುತಿಸಿ ಪ್ರದರ್ಶನಕ್ಕೆ ಕರೆಯೋದ್ರಲ್ಲಿ ಕೂಡ ಮಹತ್ವದ ಪಾತ್ರ ವಹಿಸ್ತಾರೆ ಕಣ್ ನೋಡ್ಲ! ಇದೊಂದು ರೀತೀಲಿ ಜನಗಳನ್ನ ತಮ್ಮದೇ ಮದ್ವೆಗೆ ಕರೆದ್ಹಂಗಿರುತ್ತಂತೆ ಕಣ್ ನೋಡ್ಲ. ಒಟ್ನಲ್ಲಿ, ಪ್ರತಿಯೊಂದ್ ಪ್ರದರ್ಶನದ ತಯಾರಿನೂ ಒಂದು ಮದ್ವೆ ತಯಾರಿ ಇದ್ದಂಗೆ, ಪ್ರತಿಯೊಂದು ಯಶಸ್ವಿ ಪ್ರದರ್ಶನನೂ ಕೂಡ ಒಂದು ಮಗು ಇದ್ದಂಗೆ ನೋಡ್ ಕಣ್ಲ, ನಮ್ ರಂಗಭೂಮಿಯವರಿಗೆ!

=================================================================================
ತಿಮ್ಮ: ಅಲ್ವೊ ಗುಂಡ, ಈ ಬೇಡಾಂದ್ರು ಮದ್ವೆ ನಾಟಕದ ವಿಶೇಷತೆ ಏನೊ? ಈ ನಾಟಕ ತಂಡ ಮತ್ತೆ ಅದರ ಕಲಾವಿದರ ಬಗ್ಗೆ ಹೇಳೊ?
ಗುಂಡ: ಈ ನಾಟಕವನ್ನ ಕೆ. ಗುಂಡಣ್ಣನವರು ದೇಶದಲ್ಲಿ ಯುದ್ಧ ಕಾಲದ ಎಮರ್ಜೆನ್ಸಿ ಇದ್ದಾಗ ಭಾರತದ ಮಿಲಿಟರಿಯಲ್ಲಿದ್ದಂತಹ ಒಬ್ಬ ಯೋಧ ತನ್ನ ಊರಿಗೆ ಬಂದಾಗ ನಡೆಯುವಂತಹ ಕಥೆಯ ಸುತ್ತ ಬರೆದಿದ್ದಾರೊ, ತಿಮ್ಮ. ವಿಮೂವ್ ತಂಡದವರು ರಂಗಭೂಮಿಯಲ್ಲಿ ಆಸಕ್ತಿ ಇರುವಂತಹವರನ್ನ ಹುಡುಕಿ ಅವರಿಗೆ ರಂಗ ತರಬೇತಿ ನೀಡೊದಲ್ಲದೆ ಅವರನ್ನ ರಂಗದ ಮೇಲೆ ತರುವುದಕ್ಕೆ ಅಂತ ಮಾಡಿದ ಚೊಚ್ಚಲ ಪ್ರಯತ್ನದ ಫಲವೇ, 'ಬೇಡಾಂದ್ರು ಮದ್ವೆ' ಕಣ್ಲ. ನಾನು ಮೊದಲೇ ಹೇಳಿದ ಹಾಗೆ, ಈ ನಾಟಕದ ಪ್ರತಿಯೊಬ್ಬ ಕಲಾವಿದರೂ ಸಹ ಬೇರೆ ಬೇರೆ ಕ್ಷೇತ್ರಗಳಲ್ಲಿ ವೃತ್ತಿಯಲ್ಲಿರೋರೆ ಕಣ್ಲ. ಈ ನಾಟಕವನ್ನ, ಹಲವಾರು ನಾಟಕಗಳಲ್ಲಿ ಅಭಿನಯಿಸಿ ತಮ್ಮ ಅಭಿನಯದ ಛಾಪು ಮೂಡಿಸಿರುವಂತ, ಮಾಗಡಿ ಡೇಸ್ ನಾಟಕದ ಲಕ್ಕವ್ವ ಖ್ಯಾತಿಯ ಚೈತ್ರ ಶೆಟ್ಟಿಯವರು, ತಮ್ಮ ಶಾಲಾ ಚಟುವಟಿಕೆಗಳ ಒತ್ತಡದ ಮಧ್ಯೆಯಲ್ಲೂ ಸಹ, ತಮ್ಮ ಮೊದಲ ಪ್ರಯತ್ನದಲ್ಲಿ ನಿರ್ದೇಶಿಸಿ ಯಶಸ್ವಿಯಾಗಿದ್ದಾರೆ ಕಣ್ಲ. ಇನ್ನು ಸಿಂಧು ಹೆಗ್ಗಡೆಯರು ತಮ್ಮ ಬೇರೆ ವಿಮೂವ್ ಚಟುವಟಿಕೆಗಳ ಮಧ್ಯದಲ್ಲೂ ಬಿಡುವು ಮಾಡಿಕೊಂಡು, ನಾಟಕದ ಆಯೋಜನೆಯಲ್ಲಿ ನಿರಂತರವಾಗಿ ಶ್ರಮಿಸಿದ್ದಾರೆ ಕಣ್ಲ. ಮತ್ತೆ ನಾಟಕದ ರಂಗಗೀತೆಗೂ ಕೂಡ ಇವರೇ ಧ್ವನಿಯಾಗಿದ್ದಾರೆ, ಕಣ್ಲ. ಇನ್ನು ಅಭಿಷೇಕ್ ಅಯ್ಯಂಗಾರ್ ಬಗ್ಗೆ ಮಾತಾಡೋಕೆ ನಾನು ಚಿಕ್ಕವನಾದ್ರೂ ಕೂಡ ಒಂದ್ ಮಾತ್ ಹೇಳ್ತೀನ್ ಕೇಳು - ಕಲಾವಿದರ ತಾಲೀಮನ್ನ ಅತೀ ಸೂಕ್ಷ್ಮವಾಗಿ ಗಮನಿಸಿ, ಅವರನ್ನ ಉತ್ತಮ ಕಲಾವಿದರನ್ನಾಗಿ ರೂಪುಗೊಳಿಸುವುದರಲ್ಲಿ ಇವರದು ಅತೀ ಪ್ರಮುಖ ಪಾತ್ರ ಅಂದ್ರೆ ತಪ್ಪಾಗಲ್ಲ ನೋಡ್ಲ. ಅನಿರುಧ್ ಅವರ ಹೆಸರು ಹೇಳ್ದೆ ಮುಂದಕ್ಕೆ ಮಾತನಾಡಿದ್ರೆ ತಪ್ಪಾಗುತ್ತೆ ಕಣ್ ನೋಡ್ಲ. ಹಿಂದಿನ ಪ್ರದರ್ಶನದ ಅಂತಿಮ ತಾಲೀಮನ್ನ ಗಮನಿಸಿ ಉತ್ಸಾಹ ತುಂಬಿದವರು ಇವ್ರೇ ಅಂತೆ ಕಣ್ಲ. ಇನ್ನು ನೀನು ಆಗ್ಲಿಂದ ಕಾಯ್ತಾ ಇರುವಂತಹ ಕಲಾವಿದರ ಬಗ್ಗೆನೂ ಹೇಳಿಬಿಡ್ತೀನಿ ಕೇಳು. ಮಧು ಪಾತ್ರದಲ್ಲಿ ಮಂಜುನಾಥ ಚನ್ನವೀರಪ್ಪ. ಪ್ರಸ್ತುತ ಸಾಫ್ಟ್ ವೇರ್ ಉದ್ಯೋಗಿಯಾಗಿರುವ, ಹಳ್ಳಿಯ ಹಿನ್ನೆಲೆಯಿಂದ ಬಂದವರು, ಇವರು ಸಾಹಿತ್ಯಾಸಕ್ತರು ಕೂಡ ಹೌದು. ಕರ್ನಾಟಿಕ್ ಮತ್ತು ಹಿಂದೂಸ್ಥಾನಿ ಸಂಗೀತವನ್ನ ಪ್ರಸ್ತುತ ಕಲಿಯುತ್ತಿರುವ ಇವರು, ಕೆಲವು ಕವನ, ಒಂದು ಸಣ್ಣ ಕಥೆ ರಚಿಸಿದ್ದಾರೆ ಮತ್ತು ಒಂದು ಸಣ್ಣ ಇಂಗ್ಲೀಷ್ ಪುಸ್ತಕವನ್ನ ಕನ್ನಡಕ್ಕೆ ತರ್ಜುಮೆ ಮಾಡುವುದರಲ್ಲೂ ಯಶಸ್ವಿಯಾಗಿದ್ದಾರೆ. ಇನ್ನು ಈ ನಾಟಕದ ಪ್ರಮುಖ ಪಾತ್ರ - ಸುಶೀಲಳಾಗಿ ಬಂದಂತಹ ಡಾ|| ಪುಷ್ಪಲತಾ ಸದಾಶಿವ್ - ವೃತ್ತಿಯಲ್ಲಿ ದಂತ ವೈದ್ಯೆ, ಹಾಗೆಯೇ ಪ್ರೊಫೆಸರ್ ಕೂಡ ಹೌದು. ಇವರು ನೃತ್ಯ ತರಬೇತಿ ಪಡೆಯುತ್ತಿರುವುದು ಕೂಡ ಒಂದು ವಿಶೇಷ. ಪಾಟೀಲ್ರವರ ಪಾತ್ರದಲ್ಲಿ ಬರ್ತಾ ಇರೋರು - ಪ್ರಶಾಂತ್ ದೇಶಪಾಂಡೆ. ಇವರು ವೃತ್ತಿಯಲ್ಲಿ ಮಾರ್ಕೆಟಿಂಗ್ ಅಫಿಶಿಯಲ್ ಮತ್ತು ನಾಟಕದ ಮೇಲೆ ಇವರಿಗೆ ಅತೀವ ಆಸಕ್ತಿ. ಪುಟ್ಟಣ್ಣನವರ ಪಾತ್ರದಲ್ಲಿ - ಭರತ್. ಇವರು ವೃತ್ತಿಯಲ್ಲಿ ಮಾನವ ಸಂಪನ್ಮೂಲರಂಗ. ಯಾವುದೇ ಪಾತ್ರವನ್ನ ಲೀಲಾಜಾಲವಾಗಿ ಪ್ರವೇಶಿಸುವ ಇವರು ವಿಮೂವ್ ಆಶು ವಿಸ್ತರಣ ತಂಡದಲ್ಲೂ ಪ್ರದರ್ಶನಗಳನ್ನ ನೀಡಿದ್ದಾರೆ. ಇನ್ನು ಇವರ ಪ್ರಮುಖ ಹವ್ಯಾಸ ಸೈಕ್ಲಿಂಗ್. ಕಮಲ ಪಾತ್ರದಲ್ಲಿ ಪಲ್ಲವಿ. ತಮ್ಮ ಬಿಡುವಿಲ್ಲದ ಸಾಫ್ಟ್ ವೇರ್ ಕೆಲಸದ ಒತ್ತಡದಲ್ಲಿಯೂ ತಾಲೀಮು ನಡೆಸಿ ರಂಗವನ್ನೇರಲು ಸನ್ನದ್ಧರಾಗಿದ್ದಾರೆ. ಆನಂದ್ ಮತ್ತು ಆಟೊ ಚಾಲಕನ ಪಾತ್ರದಲ್ಲಿ ಜೀವನ್. ಸಾಫ್ಟ್ ವೇರ್ ರಿಲೀಸ್ ಒಂದನ್ನ ಯಶಸ್ವಿಯಾಗಿ ಪೂರ್ಣಗೊಳಿಸಿ ರಂಗವನ್ನೇರಲು ಸಿದ್ಧರಾಗಿದ್ದಾರೆ. ಬೆಳಕಿನ ವಿನ್ಯಾಸ - ಅಭಿರಾಮ್ ಬಾಲಮುಕುಂದ್ - ಇವರಿಲ್ಲದೇ ಕಲಾವಿದರು ಸಭಾಸದರ ಕಣ್ಣಿಗೆ ಕಾಣೋದೆ ಸಾಧ್ಯವಿಲ್ಲ. ಉತ್ತಮವಾಗಿ ಬೆಳಕನ್ನ ನಿರ್ವಹಿಸುವ ಇವರು, ವೃತ್ತಿಯಲ್ಲಿ ಸೇಲ್ಸ್-ಮ್ಯಾನ್. ಪೋಸ್ಟರ್-ಗಳ ವಿನ್ಯಾಸವನ್ನ ಮಾಡಿದವರು ಅಶ್ವತಿ ಅಯ್ಯರ್ ಮತ್ತೆ ಸಿಂಧು. ಇದಲ್ಲದೇ ವಿಮೂವ್ ತಂಡದ ಅನೇಕ ಸದಸ್ಯರು ಪ್ರತ್ಯಕ್ಷ ಮತ್ತೆ ಪರೋಕ್ಷವಾಗಿ ನಾಟಕವನ್ನ ರಂಗದ ಮೇಲೆ ತರೋದಕ್ಕೆ ಶ್ರಮಪಟ್ಟಿದ್ದಾರೆ ಕಣ್ಲ, ತಿಮ್ಮ.
=================================================================================
March6-2016 - The Bedaandru Madve Show Day:
=================================================================================
ತಿಮ್ಮ: ಇನ್ನು ನೀನೇನೂ ಮಾತಾಡ್ಬೇಡ ಕಣೋ ಗುಂಡ, ಇನ್ನು ನಾನ್ ಮಾತಾಡ್ತೀನಿ. ಏನೊ ನಾಟಕ ಅದು ಗುಂಡ, ಅಬ್ಬಬ್ಬಬ್ಬ!!! ಜನ ನಕ್ಕು ನಕ್ಕು ಸುಸ್ತಾಗ್ಬಿಟ್ರಲ್ಲೊ... ನಾಟಕದ ಮಧ್ಯೆ ಲೈಟ್ ಆಫ್ ಆದಾಗಲೆಲ್ಲ - ಅದೇ ದೃಶ್ಯ ಬದಲಾವಣೆ ಆದಾಗ, ಜನ ಚಪ್ಪಾಳೆ ತಟ್ಟಿದ್ದು, ತಟ್ಟಿದ್ದೇ ಕಣ್ಲ. ನಾಟಕ ಆದ ಮೇಲಂತೂ ಜನ ಕಲಾವಿದರ ಜೊತೆ ಮಾತಾಡಿ ನಾವು ಶ್ರಮ ಪಟ್ಟು ಬಂದಿದ್ದಕ್ಕೂ ಸಾರ್ಥಕ ಆಯ್ತು, ನಮಗೆ ನಿಮ್ಮಿಂದ ಪೂರ್ಣ ಪ್ರಮಾಣದ ಮನರಂಜನೆ ಸಿಕ್ತು ಅಂದರಂತೆ ಕಣ್ಲ. 
ಗುಂಡ: ನಾನೂ ಸ್ವಲ್ಪ ಮಾತಾಡ್ಬೇಕಾಗಿದೆ, ಇರೊ ತಿಮ್ಮ. ಬಂದಂತಹ ಜನ ತೃಪ್ತಿ ಪಟ್ಟುಕೊಂಡು ಮೇಲೆ, ಒಬ್ಬ ಕಲಾವಿದನಿಗೆ ಇದಕ್ಕಿಂತ ಹೆಚ್ಚಿನ ಸಂತೋಷ ಯಾವುದಿದೆ ಹೇಳೊ ಕಣೊ, ತಿಮ್ಮ? ಅವರು ಪಟ್ಟ ಶ್ರಮಕ್ಕೂ ಒಂದರ್ಥ ಸಿಕ್ಕಿದ ಹಾಗೆ ಆಯ್ತಲ್ವ. ಇಂತಹ ಉತ್ತಮ ಪ್ರತಿಕ್ರಿಯೆ ಬಂದಾಗ ಕಲಾವಿದರಿಗೂ ಕೂಡ ಎಂತಹ ಸ್ಫೂರ್ತಿ ಬರುತ್ತಂತೆ ಗೊತ್ತಾ ಕಣ್ಲ; ಇನ್ನೂ ಇಂತಹ ನೂರು ನಾಟಕ ಮಾಡ್ಬೇಕು ಅನ್ನೋ ಅಷ್ಟು! ಇಂತಹ ಸ್ಫೂರ್ತಿ ತುಂಬೊ ಸಭಾಸದರಿಗೆ ಕಲಾವಿದರು ಚಿರ-ಋಣಿಯಾಗಿರ್ಬೇಕು ಕಣ್ಲ. ನಿನಗಿನ್ನೊಂದು ಗೊತ್ತಾ ಕಣ್ಲ, ಈ ಪ್ರದರ್ಶನಕ್ಕೆ ಅಂತಾನೆ, ಅಭಿಷೇಕ್ ಅಯ್ಯಂಗಾರ್-ರವರು ಎರಡು ದೃಶ್ಯಗಳಿಗೆ 'ಕಥೆ ಮತ್ತೆ ಅದರ ಪರಿಣಾಮ' ಹೆಚ್ಚಿಸೋದಕ್ಕೆ ಅಂತಾನೆ ಸಂಭಾಷಣೆ ಬರೆದರಂತೆ ಕಣ್ಲ. ಮೊದಲ ಬಾರಿಗೆ ಇಬ್ಬರು ಹೆಣ್ಣು ಪಾತ್ರಧಾರಿಗಳಿಗೆ ಒಂದೇ ದೃಶ್ಯದಲ್ಲಿ ಸಂಭಾಷಣೆ ಬರೆದು ಗೆದ್ದ ಖುಷಿ ಅವರಲ್ಲಿ ಕಾಣ್ತಾ ಇತ್ತು ಕಣ್ಲ! ಈ ಪ್ರದರ್ಶನ ಯಶಸ್ವಿಯಾಗೋದಿಕ್ಕೆ ಅಂತ ಅವರು, ನಾಗಶ್ರೀ, ಶ್ರೀಕಾಂತ್, ಅನಿರುದ್ಧ್, ಹಂಪ, ಸಂತೋಷ್ ಮತ್ತೆ ವರುಣ್ ತೆರೆಯ ಹಿಂದೆ ನಿಂತು ಕೆಲಸ ಮಾಡಿದ್ರಂತೆ ಕಣ್ಲ. ಅದಲ್ಲದೆ ವಿಮೂವ್ ತಂಡದ ಎಲ್ಲರ ಪರೋಕ್ಷ ಬೆಂಬಲ ಇದ್ದೇ ಇರುತ್ತೆ ಬಿಡು.
ತಿಮ್ಮ: ಅದು ಸರಿ ಗುಂಡ, ಆದರೆ ಕೆಲವು ಜನ ಮೊದಲೇ ಚೀಟಿ ಕಾದಿರಿಸಿ, ವಾಹನ ಸಂದಣಿಯಲ್ಲಿ ಸಿಲುಕಿಕೊಂಡು, ಕೊನೆಗೂ ಮಹಾತ್ಮ ಗಾಂಧಿ ರಸ್ತೆಗೆ ಬಂದರೂ ಕೂಡ, ತಮ್ಮ ವಾಹನ ನಿಲ್ಲಿಸೋಕೆ ಸ್ಥಳ ಸಿಗದೆ ಹಾಗೇ ನಾಟಕ ನೋಡೋಕಾಗದೆ ವಾಪಸ್ ಹೋದರಂತಲ್ಲ?
ಗುಂಡ: ಹೌದು ಕಣೊ ತಿಮ್ಮ, ನಾವು ಮೊದಲೇ ಸ್ಥಳಕ್ಕೆ ಹೋಗಿದ್ದಿದ್ದರಿಂದ, ನಾವು ಕೂಡ ಮಾತಾಡಿಕೊಂಡು ಎಚ್ಚರಿಕೆ ಕೊಡಬಹುದಿತ್ತು. ಮುಂದಿನ ಬಾರಿ ಅಲ್ಲೇ ಪ್ರದರ್ಶನ ನಡೆದರೆ, ಖಂಡಿತ ಎಚ್ಚರಿಕೆ ಕೊಡೋಣ, ಬಿಡು.
ತಿಮ್ಮ: ಇಂತಹ ಒಳ್ಳೆ ನಾಟಕಕ್ಕೆ ನನ್ನನ್ನ ಬಂದು ನೋಡೋ ಹಾಗೆ ಮಾಡಿ ಒಳ್ಳೆ ಉಪಕಾರ ಮಾಡಿದೆ, ಕಣ್ಲ. ಮತ್ತೆ ನನ್ನ ನಿನ್ನ ಮುಂದಿನ ಭೇಟಿ ಯಾವಾಗ?
ಗುಂಡ: ಅತೀ ಶೀಘ್ರದಲ್ಲಿ!


=================================================================================
WhomDoWeMove Today!
=================================================================================
March11-2016
ತಿಮ್ಮ: ಲೇ ಗುಂಡ, ಈ ವಿಮೂವ್-ನೋರು, ಈಗ ಏನ್ಮಾಡ್ತಾ ಇದ್ದಾರ್ ಕಣ್ಲ?
ಗುಂಡ: ಅವರೀಗ Improve (ಆಶು ವಿಸ್ತರಣ)ಗೆ ರೆಡಿಯಾಗ್ತಾ ಇದ್ದಾರ್ ಕಣ್ಲ.
ತಿಮ್ಮ: Improve ಯೆಲ್ಲಾ ಜಾಸ್ತಿ Englishಅಂತೆ, ನಂಗೆ ಒಂದೂ ಅರ್ಥ ಆಗಕ್ಕಿಲ್ಲ, ನಾನ್ ಬರಕ್ಕಿಲ್ಲ ಕಣ್ಲ! 
ಗುಂಡ: ನೀನೆ ಬರ್ತಿಲ್ಲ ಅಂದ್ರೆ, ನಾನ್ ಹೆಂಗ್ ಹೋಗ್ಲಿ! (ಇಬ್ಬರೂ ಹೊರಡುವರು, ಅಷ್ಟರಲ್ಲಿ ಜಾಕ್ ಮತ್ತು ಜಿಲ್(has listened to their conversation) entry)
Jill: What is this improve Bro?, seems like nobody turning up for this improve show, tell me why should we go and waste our time there? Will there be any scope for Kannada?
Jack: Dude, improve is a revolution in the field of theatre! Every act is instant here, added with a lot of fun. Last time there were characters like ShivRaj Kumar, Yeddiyurappa who performed in Kannada. Normally there will be a conductor and a set of actors performing the show.
Jill: What the fu** is there in that show with only a conductor and without a driver? I won't come!
Jack: Can you stop your sh** and listen to me first; in this show the driver is nothing but you - the only audience. Audience chose what they want here! They will give the situations to act and they will have their say on everything they want - including the characters!
Jill: ok, dude, agreed on the driver part, but when there is lot of comedy going on by Pappu, Khujliwal, Kannaiah and others outside itself, what comedy will I get inside greater than this?
Jill: Hey, dude - there you are mistaken! Outside for them there are boundaries to give comedy, but in improve, you get any character you want - including Rajnikant and you will see them performing you with most whacky situations that you will decide! So, now decide what you want to decide!!!
=================================================================================
March12-2016
ತಿಮ್ಮ: ಈ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ, ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ ಇದ್ದಂಗೆ, Whom Do We Moved Yesterday, Whom Are We Going To Move Tomorrow ಯಾಕಿಲ್ವೊ ಗುಂಡ? 
ಗುಂಡ: ನಿನ್ನೆ ನಿನ್ನೆಗೆ, ನಾಳೆ ನಾಳೆಗೆ, ಇಂದು ನಮ್ಮದೇ, ಚಿಂತೆ ಏತಕೆ? ಅಂತ ಹಾಡು ಕೇಳಿಲ್ವೆ ತಿಮ್ಮ ನೀನು. ಇದು Improve - ಇದರಲ್ಲಿ ಎಲ್ಲಾ ಆಗ್ಗಿಂದಾಗ್ಲೇ ನಡೆದೋಗುತ್ತೆ. Script ಆವತ್ತಿಂದೆ, Act ಆವತ್ತಿಂದೆ! ಎಲ್ಲಾ ಆವತ್ತಿಂದೆ! ನಿನ್ನೆದು ಇವತ್ತು ನಡೆಯಲ್ಲ, ಇವತ್ತಿಂದು ನಾಳೆ ನಡೆಯಲ್ಲ! ಅವತ್ತು ಶೋಗೆ ಬಂದೋರನ್ನ ಅವತ್ತೇ Fun ಅನ್ನೊ ಗಾಡಿನಲ್ಲಿ Move, ಮಾಡಿಬಿಡ್ತಾರೆ!
=================================================================================
ತಿಮ್ಮ: Art of Livingನೋರು ಡೆಲ್ಲಿನಲ್ಲಿ ಒಂದು ದೊಡ್ಡ World Culture Festival ಮಾಡ್ತಾ ಅವರಂತೆ ಕಣ್ಲ, ನಂಗೆ ಅಷ್ಟ್ ದೂರ ಹೋಗೋಕಾಗ್ತಿಲ್ಲ ಅಂತ ಒಂದೇ ಬೇಜಾರು!
ಗುಂಡ: ಅದಕ್ಯಾಕೊ ಚಿಂತೆ ಮಾಡ್ತೀಯ ತಿಮ್ಮ, Art of Livingನವರ ಉದ್ದೇಶ ಏನ್ ಕಣ್ಲ? ವರ್ತಮಾನದಲ್ಲಿ ಸಂತೋಷದಿಂದ ಬದುಕೋದು ಹೇಗೆ ಅಂತ ಹೇಳಿಕೊಡೋದು. ನೀನು ವಿಮೂವ್-ನವರ Improve ಶೋಗೆ ನಾಳೆ ಬಾ ಕಣ್ಲ! ಅಲ್ಲಿ ನಿನಗೆ ಯಾರೂ ಹೇಳಿಕೊಡಬೇಕಾಗೆ ಇಲ್ಲ, ನೀನು ಆ ಶೋನಲ್ಲಿ ಅದಾಗದೇ ಸಂತೋಷ ಪಡ್ತೀಯ, ಅವರ ಅಭಿನಯ ನೋಡಿ!
=================================================================================
ತಿಮ್ಮ: ಅಲ್ಲಾ ಕಣೋ ಗುಂಡ, ಮಲ್ಯ 9000 ಕೋಟಿ ಸಾಲದ ಟೆನ್ಷನ್ ತಡೆಯಕ್ಕಾಗ್ದೆ, ದೇಶಾನೆ ಬಿಟ್ಟು ಓಡಿ ಹೋದ್ರಂತೆ!
ಗುಂಡ: ಅವರು ಟೆನ್ಷನ್ ಕಡಿಮೆ ಮಾಡ್ಕೊಳ್ಳೇಕೆ ಅವರು ದೇಶ ಬಿಟ್ಟು ಹೋಗೋದು ಬೇಕಾಗಿರ್ಲಿಲ್ಲ ಕಣ್ಲ.
ತಿಮ್ಮ: ಮತ್ತೆ?
ಗುಂಡ: ನಮ್ಮ ವಿಮೂವ್-ನವರ ಇಂಪ್ರೊ ಶೋಗೆ ಬಂದಿದ್ದಿದ್ದರೆ ಸಾಕಾಗಿರ್ತಾ ಇತ್ತು!
=================================================================================
English Translation of above 2 conversations:
Jill: Art of Living is conducting an World Cultural Festival in Delhi, Jack. I am depressed, as I am unable to attend that function.
Jack: What is Art of Living's aim? To let people know that Living in present and enjoying the life at present will solve all your life's problems! You come to Wemove's improve and I assure that you will live at present seeing the show with most fun without anybody teaching you!
=================================================================================
Jill: Hey Jack, I heard that Mallya went away from Nation for not being able to bare the tention of his 9K crores debt!
Jack: If he were not able to bare the tention, he should not have left the nation bro!
Jill: Then what?
Jack: He should have come to the Improv show by Wemove, tomorrow!
=================================================================================
A frustrated husband comes across the board with a truck in the picture: Whom Do WeMove Today! 
Then he calls up Wemove and asks can you help in moving my wife? Wemove replies - Definitely - pls book ticket here for the same - husband laughs loud- only 200 for moving my wife away from me 😁 I was waiting for this, he books the ticket and sends it to his wife. Then he gets a call from his girlfriend I want take you a show, I have already booked the tickets, pls come along and I will drive for you today. He happily goes and ends up sitting between his wife and girlfriend in the show! 😁 😁 😁 
Now it's your turn to think what happened after the show!
=================================================================================
E=MC2
=================================================================================
May13-2016
ತಿಮ್ಮ: Einstein full formನ ತಕ್ಷಣ ಹೇಳು ಅಂದ್ರೆ ಏನು ಹೇಳ್ತೀಯೊ ಗುಂಡ?
ಗುಂಡ:
Emc2
IN
Superb
Theatre - Rangashankara
Entertaining
INdians 😊
=================================================================================
May15-2016:
ತಿಮ್ಮ: ಅಯ್ಯಂಗಾರ್ ಬೇಕರಿ ತಿಂಡಿ ಮತ್ತೆ ಪುಳಿಯೋಗರೆ ಬಗ್ಗೆ ಕೇಳಿದ್ದೀನಿ, ಆದ್ರೆ ಅಯ್ಯಂಗಾರ್ ನಾಟಕ ಅಂದ್ರೆ ಹೆಂಗಿರುತ್ತೊ ಗುಂಡ?
ಗುಂಡ: ಅಯ್ಯಂಗಾರ್ರು ಏನೇ ತಿಂಡಿ ಮಾಡ್ದ್ರೂ ತುಂಬಾ ರುಚಿಯಾಗಿರುತ್ತೆ ಕಣ್ಲ, ಇನ್ನು ನಾಟಕ ಅಂದ್ರೆ ಕೇಳ್ಬೇಕಾ?
ತಿಂಡಿ ರುಚಿ ಗೊತ್ತಾಗೋದು ತಿಂಡಿ ತಿಂದವರಿಗ್ ಮಾತ್ರ. ಹಂಗೇನೆ ನಾಟಕದ ಗತ್ತು ಗಮ್ಮತ್ತು ಗೊತ್ತಾಗೋದು ಅದನ್ನ ನೋಡ್ದಾಗ್ಲೇ ಕಣ್ಲ. ತಡ ಏನ್ ಮಾಡಿಯೇ, ನಾಳಿದ್ದೇ ರಂಗಶಂಕರದಲ್ಲಿ ನಮ್ಮ 'ಅಭಿಷೇಕ್ ಅಯ್ಯಂಗಾರ್' ನಿರ್ದೇಶನ ಮಾಡಿರೋ ಕನ್ನಡ ನಾಟಕ, ಬಂದ್ಬಿಡು - ಅದ್ರ ಚಂದನೂ ಸವಿದ್ಬಿಡೋಣ!
=================================================================================
May16-2016:
ತಿಮ್ಮ: E=MC2 ನಾಟಕದಲ್ಲಿ ಬರುವಂತಹ ಸಾಫ್ಟ್ ವೇರ್ ಎಂಜಿನಿಯರ್, ನಮ್ಮ ರಂಜನ್ ತರಹ ಏನಾದ್ರೂ 625/625 ಅಂಕ ಗಳಿಸಿದ್ದಂತಹ ವಿದ್ಯಾರ್ಥಿನಾ?
ಗುಂಡ: ಅಲ್ಲವೇ ಅಲ್ಲ... ಆದ್ರೆ ಪೂರ್ತಿ ಉತ್ತರ ಬೇಕು ಅಂದ್ರೆ ನಾಳೆ ಸಾಯಂಕಾಲ 7:30ಕ್ಕೆ ಮುಂಚೇನೆ ರಂಗಶಂಕರಕ್ಕೆ ಬಂದ್ಬಿಡು!
=================================================================================
May17-2016:
ಗುಂಡ: ತಿಮ್ಮಾ, ಅಯ್ಯಂಗಾರ್ ಯೋಗ ಅಂದ್ರೆ ಬಿ.ಕೆ.ಎಸ್.ಅಯ್ಯಂಗಾರ್, ಅಯ್ಯಂಗಾರ್ ಸಾಹಿತ್ಯ ಅಂದ್ರೆ ಮಾಸ್ತಿ ವೆಂಕಟೇಶ ಅಯ್ಯಂಗಾರ್, ಅಯ್ಯಂಗಾರ್ ಸಂಗೀತ ಅಂದ್ರೆ ದೊರೆಸ್ವಾಮಿ ಅಯ್ಯಂಗಾರ್, ಅಯ್ಯಂಗಾರ್ ನಾಟಕ ಅಂದ್ರೆ ತಿಳ್ಕೊಂಬೇಕಾ?
ತಿಮ್ಮ: ನನಗ್ಗೊತ್ತಾಯ್ತು! ಈವತ್ತು ಸಾಯಂಕಾಲ ರಂಗಶಂಕರಕ್ಕೆ ಬಂದ್ರೆ ಸಾಕ್ಷಾತ್ ನೋಡ್ಬಹುದು.
=================================================================================
ತಿಮ್ಮ: 'ಕಿರಗೂರಿನ ಗಯ್ಯಾಳಿಗಳು' ಚಿತ್ರದಲ್ಲಿ ಅತೀ ಕಡಿಮೆ ಮಾತಾಡಿರೋ ಮತ್ತೆ 'ಹಾಫ್ ಮೆಂಟ್ಲು' ಚಿತ್ರದಲ್ಲಿ ಅರ್ಧ ಸಿನಿಮಾ ಮಾತ್ರ ಮಾತಾಡಿರೊ ಸೋನುಗೌಡರವರು E=MC2 ಏನಾದ್ರೂ ಮಾತಾಡ್ತಾರೆ ಅಂತ ಅಪೇಕ್ಷೆ ಪಡಬಹುದೇನೊ ಗುಂಡ?
ಗುಂಡ: ಲೇ ತಿಮ್ಮ... ಅದು ಸಿನಿಮಾ ಇದು ರಂಗಭೂಮಿ. ಸಿನಿಮಾದಲ್ಲಿ ಮಾತು, ಭಾಷೆ ಬರದೇ ಇದ್ರೂ ನಡೆಯುತ್ತೆ. ಆದ್ರೆ ರಂಗಭೂಮಿಯಲ್ಲಿ ಹಾಗಾಗೋದಿಲ್ಲ. E=MC2 ನಾಟಕದ ಕಥೆ ಪ್ರಕಾರ ಸೋನು ಗೌಡರವರ ಮಾತಿಗೆ ಉತ್ತಮವಾದ ಅವಕಾಶ ಇದೆ ಕಣ್ಲ. ಹಾಗೇನೆ ಅವರಿಗೆ ಕನ್ನಡ ಭಾಷೆ ಮೇಲಿರೊ ಹಿಡಿತ ಸ್ಪಷ್ಟವಾಗಿ ಗೊತ್ತಾಗುತ್ತೆ ಕಣ್ಲ. ಹಾ! ಇನ್ನೊಂದು ವಿಷಯ ಏನಪ್ಪಾ ಅಂದ್ರೆ, ಈ ದಿನದ ಎಲ್ಲಾ ಪತ್ರಿಕೆಗಳಲ್ಲೂ ನಮ್ಮ ನಾಟಕದ್ದೇ ಸುದ್ದಿ ಅಂತೀನಿ, ನೀನೂ ಒಂದಪ ಕಣ್ಣಾಡಿಸಿಬಿಡಟ್ಟು ಸಾಯಂಕಾಲ ಬಂದ್ಬಿಡು.
=================================================================================
Malgudi Express:
=================================================================================
June14-2016
ತಿಮ್ಮ: ಮೊನ್ನೆ ಅಯ್ಯಂಗಾರ್ ನಾಟಕಕ್ಕೆ (E=MC2) ಹೋಗಿದ್ದೆ ಕಣ್ಲ, ಅದೇನ್ ಜನ, ಅದೇನ್ ಜನ ಅಂತೀನಿ! ಒಂದೊಂದು ಡೈಲಾಗಿಗೂ ಜನ ನಕ್ಕಿದ್ದು ನಕ್ಕಿದ್ದೇ, ಚಪ್ಪಾಳೆ ತಟ್ಟಿದ್ದೂ ತಟ್ಟಿದ್ದೇ ಅಂತೀನಿ.
ಗುಂಡ: ಅದು ಇರ್ಲಿ! ಈಗ ಅದೇ ಅಯ್ಯಂಗಾರ್ರು 3+1 ನಾಮ ಹಾಕಲಿಕ್ಕೆ ತಮ್ಮ ಶಿಷ್ಯನ್ನ ಬಿಟ್ಟಿದ್ದಾರಂತೆ ಕಣ್ಲ!
ತಿಮ್ಮ: 3 ನಾಮ ಹಾಕೊ ಅಯ್ಯಂಗಾರ್ರನ್ನ ನಾನ್ ನೋಡಿದ್ದೀನಿ ಇದ್ಯಾವುದಿದು 4ನೇ ನಾಮ, ನನಗೆ ನೀನೇನ್ ಹೇಳ್ತಾ ಇದ್ದೀಯೊ ಅರ್ಥ ಆಗ್ಲಿಲ್ಲ ಕಣ್ಲ! ಸ್ವಲ್ಪ ಬಿಡಿಸಿ ಹೇಳ್ಲ.
ಗುಂಡ: ನಾನು ಈ ಮೂರು ನಾಮದ ವಿಷಯ ಸುಮ್ನೆ ತೆಗೀಲಿಲ್ಲ ಕಣ್ಲ. ಟಿ.ಪಿ.ಕೈಲಾಸಂ (ತಂಜಾವೂರು ಪರಮಶಿವ ಕೈಲಾಸಂ) ಈ ಅಯ್ಯಂಗಾರ್ ನಾಮದ ಬಗ್ಗೆ ಒಂದ್ಮಾತ್ ಹೇಳ್ತಾ ಇದ್ರು ಕಣ್ಲ. ಅದೇನಪ್ಪ ಅಂತ ಅವರ ಬಾಯಲ್ಲೇ ಕೇಳ್ಬಿಡೋಣ ಬಾ - "ಆ ಕಡೆ ನಮ್ಮ ಹನುಮು ಬಾಲಾನ ಮುದುರ್ಕೊಂಡು ಕೈ ಮುಕ್ಕೊಂಡು ನಿಂತಿದ್ದಾನೆ. ಅಂದ್ರೆ ಅವ್ನು ಜನರಿಗೆ "Do not wag your tail please" ಅಂತ ಕೈ ಮುಗ್ದು ಹೇಳ್ತಿದ್ದಾನೆ. ನಾಮದ ಈ ಕಡೆ ಮೂಗ್ನ ಮೂಂದ್ಮಾಡ್ಕೊಂಡು ನಮಸ್ಕರಿಸುತ್ತಾ ನಿಂತಿರೋ ಗರುಡ "Do not poke your nose un-necessarily in others affairs" ಅಂತ ಜನರಿಗೆ warn ಮಾಡ್ತಿದೆ. And now, suppose our people do either of this, they are sure to get the centre one". ಈ ಟಿ.ಪಿ.ಕೈಲಾಸಂ ತಂಗಿ ಟಿ.ಪಿ.ಪದ್ಮಮ್ಮ ಕ್ಯಾಪ್ಟನ್ ಸಿ.ಕೆ.ಅನಂತನಾರಾಯಣ ಅಯ್ಯಂಗಾರ್ರವರನ್ನ ಮದುವೆಯಾಗಿದ್ರಂತೆ ಕಣ್ಲ. ಟಿ.ಪಿ.ಕೈಲಾಸಂ ಅವರದು ಮೂಲತಃ ಅಯ್ಯರ್ ಮನೆತನ. ಅಯ್ಯಂಗಾರ್ರವರು ಇವರ ಸಂಬಂಧಿಕರಾದ್ದರಿಂದ ಸೂಕ್ಷ್ಮವಾಗಿ ಗಮನಿಸಿನೇ ಈ ಮಾತು ಹೇಳಿರ್ಬೋದು ಕಣ್ಲ. ಈಗ ನೀನು ಕಾಯ್ತಾ ಇರೊ 4ನೇ ನಾಮದ ಬಗ್ಗೆ ಹೇಳ್ತೀನಿ ಕೇಳು: ಅದೇ ಅಯ್ಯರ್ ನಾಮ! ರಾಸಿಪುರಂ ಕೃಷ್ಣಸ್ವಾಮಿ ಅಯ್ಯರ್ ನಾರಾಯಣಸ್ವಾಮಿ (R.K. Narayan) ಅವರ ಮಾಲ್ಗುಡಿ ಡೇಸ್ ಸಣ್ಣ ಕಥೆಗಳಲ್ಲಿ ನಾಲ್ಕು ಕಥೆಗಳನ್ನ ರಂಗ ರೂಪಕ್ಕೆ ತಂದು ಅರ್ಪಿಸ್ತಾ ಇರೋದು ನಮ್ಮ WeMove ಅಭಿಷೇಕ್ ಅಯ್ಯಂಗಾರ್. 3+1 ಅಯ್ಯಂಗಾರ್ + ಅಯ್ಯರ್ ನಾಮಗಳ ವೈಶಿಷ್ಟ್ಯವನ್ನ ಕೈಲಾಸಂ ಹೇಳಿರೊ (only 3 naamas explained by TP Kailasam) ರೀತೀಲಿ correlate ಮಾಡಿದ್ರೆ 3+1 ಕಥೆಯ ನೀತಿ ಸಿಗುತ್ತೆ -
Do not wag your tail please - Fellow feeling
Do not poke your nose un-necessarily in others affairs - Astrologer's Day
You will definitely become Eswaran - centre Naama If you are at extreme
ಇದು ಅಯ್ಯರ್ ನಾಮ - hope ಅನ್ನೋದು ಕೈ ಕೊಟ್ಟಾಗ್ಲೂ ಕೂಡ ಯಾರಾದ್ರೂ hopefully ಬಂದು ಕೈ ಹಿಡೀತಾರೆ - Out of Business
ತಿಮ್ಮ: ವೇದಾಂತಿ - ನಿಂದು ಜಾಸ್ತಿ ಆಯ್ತು, ಸಾಕು ನಿಲ್ಸು - ಇದೆಲ್ಲಾ ಅರ್ಥ ಆಗ್ಬೇಕಾಂದ್ರೆ ಯಾವಾಗ್ಲೊ ಓದಿರೊ K.R.Narayan ಕಥೆಗಳನ್ನ ಮತ್ತೆ ಓದ್ಬೇಕಾಗುತ್ತೆ!
ಗುಂಡ: ಇದು ಅರ್ಥ ಆಗ್ಬೇಕಾದ್ರೆ ಕಥೆಗಳನ್ನೇನೂ ಮತ್ತೆ ಓದ್ಬೇಕಾಗಿಲ್ಲ, K.H.ಕಲಾಸೌಧಕ್ಕೆ ಜೂನ್ 26ನೇ ತಾರೀಖು ಸಾಯಂಕಾಲ ಬಂದ್ರೆ ಸಾಕು. ಮತ್ತೆ ನಿನಗೊಂದು confusion ಇದೆ ಅದನ್ನ ನಾನು clear ಮಾಡ್ಲೇ ಬೇಕು. ನೀನ್ ಹೇಳ್ತಾ ಇರೊ K R Narayanan (ಕೊಚೆರಿಲ್ ರಾಮನ್ ನಾರಾಯಣನ್) ನಮ್ಮ ದೇಶದ ರಾಷ್ಟ್ರಪತಿಯಾಗಿದ್ದೋರು. ಮಾಲ್ಗುಡಿ ಡೇಸ್ ಬರೆದೋರು R K Narayan (ರಾಸಿಪುರಂ ಕೃಷ್ಣಸ್ವಾಮಿ ಅಯ್ಯರ್ ನಾರಾಯಣಸ್ವಾಮಿ). ಇವರಿಬ್ಬರೂ ಸಹ ಸರಿಸುಮಾರು ಒಂದೇ ಕಾಲದಲ್ಲಿ ಬದುಕಿದ್ದ ಭಾರತದ ಗಣ್ಯಮಾನ್ಯರು. ಆಮೇಲೆ ಇನ್ನೊಂದು ಏನಪ್ಪಾ ಅಂದ್ರೆ - ಈ ನಾಟಕಾನ marketing ಮಾಡ್ಲಿಕ್ಕೆ ಅಂತ ಸ್ವತಃ RK Narayan ಮತ್ತೆ Swamyನೇ ಬರ್ತಿದ್ದಾರಂತೆ ಕಣ್ಲ.
ತಿಮ್ಮ: ಹೌದಾ...!!!
ಗುಂಡ: ಹೌದು ತಿಮ್ಮ. ಹೇಳೋದು ನನ್ನ ಧರ್ಮ, ಕೇಳೋದು ನಿನ್ನ... summary ಅರ್ಥ ಆಗಿರ್ಬೇಕು ಅಂದ್ಕೊಂತೀನಿ! Bye.
ಗ್ರಂಥ ಋಣ: ಕನ್ನಡಕ್ಕೊಬ್ಬನೇ ಕೈಲಾಸಂ - ಶ್ರೀ ಬಿ.ಎಸ್.ಕೇಶವರಾವ್
=================================================================================
June17-2016:
Swami: Namasthe R.K. Narayan sir. How come you are here now in Malgudi after 15 years.
RKN: Namasthe Swaminathan. Few friends of mine recreating Malgudi in Kalasoudha on 26th June, I came here to see and enjoy it. And how come you are still here and you have never grown at all.
Swami: We are the characters created by you, sir. We will always be of same age for ever and ever.
RKN: True. The writers die, the actors also age and die - but the writings - the place like Malgudi - the characters - have no death.
Swami: Sir - hold on, you told writers die, but how is it possible that you are coming and speaking to me!
RKN: Yes, I agree that writers have death, but when anyone reads my writings, feel my presence over there as though I am next to them and narrating the stories and I re-live with them in Malgudi at that moment. That aside, don't forget to come and relive Malgudi through Malgudi Express.
=================================================================================
Swami: What is the similarity between Kannada movie GBSM and Malgudi Express?
RKN: The similarity is there in the number of letters. GBSM is a 4 letter worded cinema name and there are 4 Kannada words in it. Malgudi Express is bringing 4 short stories on stage.
Swami: What is the similarity between kannada movie THITHI and Malgudi Days?
RKN: Read it here:
Film review: ‘Thithi’ is like ‘Malgudi Days’, only more cynical and profane
Swami: What is the similarity between Karva or Rangi Tharanga and Malgudi Express?
RKN: There is no similarity as there are no short stories containing horror selected by WeMove friends for this play.
Swami: Lastly, any similarity between U-TURN movie and Malgudi Express?
RKN: Here again there is no similarity but you will definitely take U-TURN to your old memories of Malgudi and will have a nostalgic ride.
=================================================================================
Swami: Shankar Nag did it last time. Do you think Wemove can do that better?
RKN: Well, Shankar Nag created an unforgettable memory through the TeleSerial. His name itself starts with S. S means Success and he succeeded in that. You might already know Abhishek and few others from Wemove did the scripting for Malgudi. Anirudh is directing this time. Please notice one thing common between them - that their name starts with A. A means Agile. Agility is very important being in theatre and it is not first time they are bringing Malgudi Express. They have won many hearts last time when they did it everytime. And this time it's with new team and new revolution - I believe will happen. And you know about Music and Lights. It will be done by Abhishek Narain and Manju Narayan - Do you know what they have in common - Narayan and I am R.K.Narayan. I think you understood the summary, Are you?
Swamy: Everything fine, what about the production and the actors?
RKN: Well, you need to wait for that...!
=================================================================================
June22-2016
Swami: R.K.N. sir, R.K.N. sir, wait wait, you seem to be in hurry, where are you rushing for?
RKN: I would like to reserve my tickets now itself for Malgudi Express.
Swami: Sir, let's go on 26th June on the day the Malgudi Express is arriving and buy the tickets at Kalasoudha itslef. If this train goes, there will definitely be next one, why to worry?
RKN: There you are wrong! The last train was 2 years ago and it is coming after a long time. I would not like to miss it and would like to buy tickets now itself.
Swami: Sir, please buy one for me as well.
=================================================================================
June23-2016:
Swami: Why should anyone come to Kala Soudha to watch a play when there is already such nice drama shows by kids happening and available to watch in TV sitting at home?
RKN: Yes, the drama shows in TV are very much entertaining for everyone and learning for kids as well. Famous actor in Kannada, Dr.Vishnuvardhan used to say - "The people are moving slowly from big screen to small screen and again time will come and they will come back to big screen but we need to wait for that." His words are so true that we are living it now. What I would say now is, it's time that we should switch to live theatre parallel to what may have technology has enabled us. Listen to what I say next - recently I went to a show in Rangashankara - it is "How Cow Now Cow". It is mainly designed for kids. Malgudi Express director Anirudh acted in that. The show was so much interacting with the audience that, kids were not exactly audience but they were part and parcel of the show. I listened to some kids thanking their parents for bringing them for the show. It shows how much they loved it. You missed it Swami, you should have come with me.
=================================================================================
June25-2016:
Swami: RKN sir, I am now ready to watch Malgudi Express. You told that you will introduce the cast and production. Can you please, I am waiting for it.
RKN: Well, I would like to introduce this person first who always tries to make most of the marketing and lively pictures of the actors through amazing new techniques and niche technologies. She is Sindhu Hegde. She is the back bone for every play that happens successfully in WeMove. She is nice Singer and organizer as well. If you want to listen her live, don't miss this show.
And I will be there to take you into the city of Malgudi. Kashyap Achar is playing my role and you must know him - he had acted in many Kannada serials including the famous "Dandapindagalu". He is the head of Vijayanagara Bimba. Coming to the first story - it is "Astrolegers Day". Main actors here are:
Bharath as Astroleger
Ranjan Syd Barrett as a stranger
Pallavi S as Astrolger's wife
Srikanth as Ground nut seller
Bharath and Pallavi were father and daughter in their previous debut kannada play - Bedandru Madve
Ranjan has much experience as an actor and he was directed Malgudi Express previously.
Srikanth - He needs more space to write, I will take it up some time next...
=================================================================================
Swami: RKN sir, you have introduced the first story casting. What about other stories?
RKN: Let me go one by one. Next is "Out of Business". The main casting here is:
Anand Rajamani as Ramarao
Ram Manjjonaath as Gundappa
DrPushpa Latha as Ramarao's wife
Jeevan M Reddy as Narayan
Anand is much experienced as an actor. He has experience as an improve artist as well and is part of IamProWise team of Wemove.
Ram Manjjonath - You know what, I will tell you a secret about him. He changed his name from Manjunath to Manjjonath according to numerology. Ofcourse he has not yet met our Astrologer in the first play. You must know him already, he heads "Antaranga" and also acted in many films including the successful U-Turn.
Dr.Pushpalatha Sadashiv - She is a well known dentist. She had acted in Bedandru Madve drama as Susheela. It was her debut drama along with Jeevan being her brother once and another time as her classmate.
=================================================================================
June26-2016 - Malgudi Express Show Day
=================================================================================
Swami: What about Eshwaran?
RKN: Hampa Kumar Angadi as Eshwaran
Manjunatha Channaveerappa as Eshwaran's father
Suraj Kiran as Setji
Raghavendra Bk as Nerd
Hampa has acted in many roles previously in Malgudi Express and proved his acting capabilities. He has also acted as Auto Driver in E=MC2 from WeMove.
Manjunath was debuted his acting with "Bedandru Madve". This will be his first English play.
Suraj is an exceptional actor. He can convert himself into any type of character is proved with Setji character. Watching his performance is a delight. He is also proved his skills being in IamProWise team of Wemove.
Raghavendra debuted in very recent play - Feb29th. This is his second appearance on stage with WeMove.
=================================================================================
Swami: Sir, I am waiting from long time to hear about Srikanth and Harsha - The fellow and the feeling. Please introduce them.
RKN: You seems to know the casting already for Fellow Feeling. Well, Srikanth as "New Comer".
Harsha as Rajam Iyer.
Srikanth is the same famous Ibu in Magadi Days and E=MC2. He has also acted in multiple roles previously in Malgudi Express. He is a very good improvisational actor, so has also found place for himself in IamProWise team.
Lastly, I want to tell about the best actor I have seen in my life. He is Sri Harsha Grama. He has acted in countless plays till now and has acted multiple times in various roles previously in Malgudi Express and won the audience heart.
So, why wait, let's be the part of the play directly tomorrow. Tell your friends, who don't want to miss the play, using the following links, as I heard that there will only be 50 tickets kept to give at the venue.
Tickets:
http://tinyurl.com/z3l6982
For tickets with discount visit - http://tinyurl.com/hyzbf8t
=================================================================================
ಮಾಗಡಿ ಡೇಸ್:
=================================================================================
July15-2016:
ತಿಮ್ಮ: ಮಾಲ್ಗುಡಿ ಎಕ್ಸ್ಪ್ರೆಸ್ ನಾಟಕಕ್ಕೆ, ಸಿ.ಎಂ. ಕಿಸ್ ಭಾಗ್ಯನೂ ಆವತ್ತೇ ಆಗಿದ್ರಿಂದ ಹೆಚ್ಚಿಗೆ ಜನ ಬರ್ಲಿಲ್ಲ ಅಂತ ಸುದ್ದಿ!...
ಗುಂಡ: ನಿಂಗೆ ಎಲ್ಲಾ ಇಂಥ ಸುದ್ದಿನೇ ಸಿಗೋದು ಕಣ್ಲ! ಆಹೊತ್ತು ಕೆ.ಹೆಚ್.ಕಲಾಸೌಧದಲ್ಲಿ ವಿಮೂವ್ ಪಾಲಿಗೆ ಒಂದು ಇತಿಹಾಸ ಸೃಷ್ಟಿಯಾಗಿದ್ದು ನಿನಗೇನಾದ್ರೂ ಗೊತ್ತಾ? 300 ಜನ ಕೂರೋ ಸಭಾಂಗಣದಲ್ಲಿ 330 ಜನ ಕಿಕ್ಕಿರಿದು ತುಂಬಿ ನಾಟಕವನ್ನ ಕಣ್ತುಂಬಿಕೊಂಡ್ರು.
ಅದಿರಲಿ, ನಿಂಗೆ ಸ್ಕ್ರೆಜೊ಼ಫ್ರೆನಿಕ್ ವ್ಯಕ್ತಿತ್ವ ಅಂದ್ರೆ ಏನು ಅಂತ ಗೊತ್ತಾ ಕಣ್ಲ?
ತಿಮ್ಮ: ಅದೇ ಇತ್ತೀಚೆಗೆ ನನ್ನ ಅಣ್ಣನೇ ಒಬ್ಬ ದೊಡ್ಡ ಸ್ಕ್ರೆಜೊ಼ಫ್ರೆನಿಕ್ ಅಂತ ಹೇಳಿದ ಒಬ್ಬ ತಮ್ಮನ ಬಗ್ಗೆ ಕೇಳ್ಪಟ್ಟೆ, ಹೌದು, ಹಂಗಂದ್ರೆ ಏನು?
ಗುಂಡ: ನಿನ್ನನ್ನ ನಾಟಕಕ್ಕೆ ಕರ್ಕೊಂಡು ಬರೋಣ ಅಂದ್ರೆ ಬರೀ ರಾಜಕೀಯದ ಸುದ್ದಿನೇ ಕಟ್ಕೊಂಡಿದ್ದೀಯ ನೀನು. ಸರಿ, ಸ್ಕ್ರೆಜೊ಼ಫ್ರೆನಿಕ್ ಅಂದ್ರೆ ಆಡು ಭಾಷೇಲಿ 'ಹುಚ್ಚ' ಅಂತ ಅರ್ಥ. ವಿಷಯಕ್ಕೆ ಬರೋಣ - ಹಿಂದಿನ್ಸಲ E=MC2 ನಾಟಕದಲ್ಲಿ ಸ್ಕ್ರೆಜೊ಼ಫ್ರೆನಿಕ್ ಪಾತ್ರವನ್ನ ರಂಗಶಂಕರದಲ್ಲಿ ವ್ಯವಸ್ಥಿತವಾಗಿ ಕಣ್ಮುಂದೆ ತಂದಿದ್ದ ಅಭಿಷೇಕ್ ಅಯ್ಯಂಗಾರ್ರವರು ಈ ಸಲ ರಾಜಕೀಯದ ವಿಡಂಬನಾತ್ಮಕವಾದ ನಾಟಕವಾದಂತಹ "ಮಾಗಡಿ ಡೇಸ್"ನ್ನ ರಂಗಶಂಕರಕ್ಕೆ ಇದೇ, 27ಕ್ಕೆ ತರ್ತಿದ್ದಾರೆ. ರಾಜಕೀಯ ರಣಾಂಗಣವಾಗಿರೊ ನಮ್ಮ ಕರ್ನಾಟಕದಲ್ಲಿ ಈ ನಾಟಕ ಏನಾದ್ರೂ ಬದಲಾವಣೆ ಬಿತ್ತೋದಕ್ಕೆ ಸಾಧ್ಯನಾ ಅಂತ ಕಂಡ್ಕೊಳ್ಳೋಕೆ, ತಿಮ್ಮ - ಈ ನಾಟಕಾನ ಮಾತ್ರ ತಪ್ಪಿಸ್ಕೊಂಬೇಡ.



=================================================================================
July18-2016:
ತಿಮ್ಮ: (TV 69N ಬ್ರೇಕಿಂಗ್ ನ್ಯೂಸ್ ನೋಡ್ತಿದ್ದಾನೆ - ಅಷ್ಟರಲ್ಲಿ ಗುಂಡನ ಎಂಟ್ರಿ!) ಬ್ರೇಕಿಂಗ್ ನ್ಯೂಸ್ ಅಂತೆ - ಸರ್ಕಾರ ಮಧ್ಯ ರಾತ್ರಿವರೆಗೂ ಮದ್ಯ ಅಂದಿದ್ದೇ ತಡ - ಅವನ್ಯಾರೊ ಐಬು ಅನ್ನೋನು ನಿನ್ನೆ ರಾತ್ರಿಯಿಂದ ಇನ್ನೂ ಮನೆ ಸೇರಿಲ್ವಂತೆ. ಅವನ ಹೆಂಡ್ತಿ ಲಕ್ಕವ್ವ ಈಗ ಸಿ.ಎಂ.ನ ದರ್ಶನಭಾಗ್ಯ ಸಿಗುತ್ತೇನೊ ಅಂತ ಅವರ ಕಛೇರಿಗೆ ಹೋಗ್ತಿದ್ದಾಳಂತೆ! ಅದಿರ್ಲಿ ಈ ಐಬು ಮತ್ತೆ ಲಕ್ಕವ್ವ ಯಾರು ಅಂತ ಆವಾಗ್ಲಿಂದ ತಿಳ್ಕೊಳ್ಳಕ್ಕೆ ಅಂತ ಟಿ.ವಿ. ನೋಡ್ತಾ ಇದ್ದೀನಿ, ಹೇಳ್ತಾನೆ ಇಲ್ಲ ಈ ಬೋಳೀಮಗ ರಿಪೋರ್ಟರ್ರು!!!
ಗುಂಡ: ಲೇ... ನಿಂಗೆ ಐಬು ಮತ್ತೆ ಲಕ್ಕವ್ವ ಅಂದ್ರೆ ಯಾರು ಅಂತಾನೆ ಗೊತ್ತಿಲ್ವ? ಜೋಕ್ ಆಫ್ ದ ಇಯರ್! ನಾನ್ ಬಡ್ಕೋಂತಾನೆ ಇರ್ತೀನಿ, ಅಭಿಷೇಕ್ ಅಯ್ಯಂಗಾರ್ ನಾಟಕಗಳ್ನ ಮಿಸ್ ಮಾಡ್ಬೇಡ್ವೊ ಅಂತ, ಆದ್ರೂ ನೀನ್ ನೋಡಲ್ಲ, ಪಕ್ಕದಲ್ಲೇ ಏನಾಗ್ತಾ ಇದೇ ಅನ್ನೋದು ನಿನಗ್ ಗೊತ್ತಾಗಲ್ಲ. ಹೋಗ್ಲಿ ಬಿಡು - ಇವರ್ಯಾರು ಅಂತ ತಿಳ್ಕೊಳ್ಳೋಕೆ ಇದೇ 27ಕ್ಕೆ ರಂಗಶಂಕರಕ್ಕೆ ಬಂದ್ಬಿಡು.



=================================================================================

July19-2016:
ತಿಮ್ಮ: ಕಬಾಲಿ!
ನೆರುಪ್ಪು ಡಾ!
ನೆರುಪ್ಪು ಡಾ!

ಮುಡಿಯುಮಾ?
ಕಬಾಲಿ ಡಾ! ಕಬಾಲಿ...
ಡೇ ಗುಂಡಾ! ನಾಂ ಮಾಗಡಿ ಡೇಸ್ ಡ್ರಾಮಕು ವರ್ರಮಾಟೆ! ಕಬಾಲಿ ಟಿಕೆಟ್ ಎಂಗಳ್ಕು ವೆಡ್ನಸ್ಡೇದ ಇರುಕು. ಅಂದವರಕು ಎಲ್ಲಾ ಥಿಯೇಟರ್ ಹೌಸ್ಫುಲ್ ಇರುಕು! ಸೋ, ಎಂಗಳ್ ಡ್ರಾಮಾಕು ವರ್ರಮಾಟ!
ಗುಂಡ: ಡೇ ತಿಮ್ಮ, ಮುಡಿಂಜಿದಾ? ಉಂಗಳ್ ಸೊಲ್ಲಾಚಾ? ಇನ್ನು ನಾನ್ ಮಾತಾಡ್ಬೋದ? ನಾವೆಲ್ಲೇ ಹೋದ್ರೂ, ಏನೇ ಮಾಡ್ದ್ರೂ ನಾವು ನಡೆದು ಬಂದ ದಾರೀನ ಮತ್ತೆ ನಮ್ಮ ಮೂಲವನ್ನ ನಾವು ಮರೀ ಬಾರ್ದು. ನಾನು ಇದನ್ನ ನಮ್ಮ ತಲೈವಾಗಲ್ಲ ಹೇಳ್ತಾ ಇರೋದು, ನಿನಗೆ! ರಜನೀಕಾಂತ್ ಸರ್ ಮೊದಲು ಇದೇ ನಮ್ಮ ಬೆಂಗ್ಳೂರಿನ ಗವೀಪುರದ ಶಾಲೇಲಿ ಓದ್ತಾ ಇದ್ದಾಗ ಹತ್ತಿರದಲ್ಲೇ ಇದ್ದ ರಾಮಕೃಷ್ಣ ಆಶ್ರಮದಲ್ಲಿ ಕನ್ನಡದ ನಾಟಕಗಳಲ್ಲಿ ಅಭಿನಯ ಮಾಡ್ತಾ ಇದ್ರು. ಆಗ ಇವರ ನಾಟಕವನ್ನ ಕಣ್ತುಂಬಿಕೊಂಡು ಮೆಚ್ಚಿಕೊಂಡವರಲ್ಲಿ ನಮ್ಮ ಕನ್ನಡದ ವರಕವಿ ದ.ರಾ.ಬೇಂದ್ರೆ ಕೂಡ ಒಬ್ರು. ಇದಲ್ದೇನೆ ಇವರು ಕಂಡಕ್ಟರ್ ಕೆಲ್ಸದಲ್ಲಿದ್ದಾಗ ಕೂಡ ಕನ್ನಡದ ನಾಟಕಕಾರರಲ್ಲಿ ಒಬ್ಬರಾದಂತಹ ಟೋಪಿ ಮುನಿಯಪ್ಪನವರ ಗರಡೀಲಿ ಪೌರಾಣಿಕ ನಾಟಕಗಳಲ್ಲಿ ಅಭಿನಯಿಸ್ತಾ ಇದ್ರು. ಈಗ ನಮಗೆ ರಜನೀಕಾಂತ್ ಅವರ ನಾಟಕವನ್ನ ಸಾಕ್ಷಾತ್ ನೋಡೊ ಅದೃಷ್ಟ ಇಲ್ಲ ಬಿಡು. ಆದ್ರೆ ಬುಧವಾರದ ನಾಟಕ ನೀನ್ ಮಿಸ್ ಮಾಡ್ಕೊಂಡ್ರೆ ಮತ್ತೆ ಅದೇ ನಟರನ್ನ ನಾಟಕದಲ್ಲಿ ನೋಡೊ ಅದೃಷ್ಟ ಬರುತ್ತೊ ಇಲ್ವೊ! ಯಾವ ಹುತ್ತದಲ್ಲಿ ಯಾವ ಹಾವಿದೆ ಅಂತ ಯಾರಿಗ್ಗೊತ್ತು?
=================================================================================
July20-2016:
ತಿಮ್ಮ: RG ಪಪ್ಪು ಏನಾದ್ರೂ ನಮ್ಮ ರಾಜ್ಯದ ಮುಖ್ಯಮಂತ್ರಿ ಆಗಿದ್ದಿದ್ರೆ ಪರಿಸ್ಥಿತಿ ಏನಾಗ್ಬಹುದಿತ್ತು?
ಗುಂಡ: ಈಗ ನಮ್ಮ ಮುಖ್ಯಮಂತ್ರಿ ಚಿಂತನೆ ಮಾಡಿರೊ ತರಹ ಪಾರ್ಕು ಮತ್ತೆ ಬಯಲನ್ನ ಖಂಡಿತ ಕಡಿಮೆ ಮಾಡ್ತಿರ್ಲಿಲ್ಲ ಬದಲಾಗಿ ಹೆಚ್ಚಿಸಿರೋರು, ಆದ್ರೆ ಆ ಜಾಗದಲ್ಲೆಲ್ಲ ಅವರೇ ಆಟ ಆಡಿ ಚಿಂಟು ಟಿವಿ TRP ಹೆಚ್ಗೆ ಮಾಡ್ತಿದ್ರಾ ಅನ್ನೋದು ಪ್ರಶ್ನೆ!
ತಿಮ್ಮ: ಖುಜ್ಲೀವಾಲ್ ಆಗಿದ್ದಿದ್ರೆ?
ಗುಂಡ: ಕನಕಪುರ ರೋಡಲ್ಲಿರೋ ನ್ಯಾಚುರೋಪತಿ ಕೇಂದ್ರದಲ್ಲೇ ವಿಧಾನಸೌಧದ ಕಲಾಪಗಳು ನಡೀಬೇಕಿತ್ತು!
ತಿಮ್ಮ: ನಮೋ?
ಗುಂಡ: ನಮ್ಮ 27ನೇ ತಾರೀಖು ರಂಗಶಂಕರದ ಶೋ ರದ್ದಾಗಿರೋದು!
ತಿಮ್ಮ: ಇದೇನು ಒಳ್ಳೇ ಸೂಚನೆಯೋ ಅಥವಾ ಕೆಟ್ಟದ್ದೋ?
ಗುಂಡ: ಹ಼ಹ಼ಹ಼ ಹ಼ಹ಼ಹ಼ ನಿನ್ನ ಪ್ರಶ್ನೆ ಕೇಳ್ತಾ ಇದ್ರೆ ಶೇಕ್ಸಪಿಯರ್ ಹೇಳ್ತಾ ಇದ್ದ ಒಂದು ಮಾತು ಜ್ಙಾಪಕ ಬರುತ್ತೆ! - "ಈ ಪ್ರಪಂಚದಲ್ಲಿ ಒಳ್ಳೇದು ಅಥವಾ ಕೆಟ್ಟದ್ದು ಅಂತ ಯಾವುದೂ ಇಲ್ಲ. ಎಲ್ಲಾ ಇರೋದು ನಮ್ಮ ಮನಸ್ಸಲ್ಲಿ."!
=================================================================================
July22-2016:
ತಿಮ್ಮ: ತುಂಬಾ ಜನ ಏನಂದ್ಕೊಳ್ತಿದ್ದಾರೆ ಗೊತ್ತ ಇಂದಿನ ಸರ್ಕಾರದ ಬಗ್ಗೆ - It is dead!
ಗುಂಡ: ಹಾಂ.. Deadಲ್ಲಿ 2D ಇದೆ. ಹಾಗೇನೆ ಕರ್ನಾಟಕದ ಹೆಚ್ಚು ಮುಖ್ಯಮಂತ್ರಿಗಳ ಹೆಸರಿನಲ್ಲೂ ಕೂಡ 2D ಇತ್ತು ಮತ್ತು ಈಗಿನವರ ಹೆಸ್ರಲ್ಲೂ ಇದೆ ಮತ್ತೆ ನಾವು ಮಾಡ್ತಾ ಇರೋ ಮಾಗಡಿ ಡೇಸ್ ನಾಟಕದಲ್ಲೂ ಇದೆ. ಹಂಗಂತ 2D ಇರೋದೆಲ್ಲಾ Dead ಅಂತ ತಿಳ್ಕೊಂಬೇಡ. ನಮ್ಮ ನಾಟಕದ 2D ಅಂದ್ರೆ DawnDew!

=================================================================================
July24-2016:
ತಿಮ್ಮ: ಏನ್ ನಿನ್ ಪ್ರಾಬ್ಲಮ್ಮು?
ಗುಂಡ: ಏನೊ ತಿಮ್ಮ, ಗಡ್ಡಪ್ಪನ್ ಡೈಲಾಗು ನಿನ್ ಬಾಯಲ್ಲಿ?
ತಿಮ್ಮ: ಏನ್ ಆ ಮಾಗಡಿ ಡೇಸ್ ಐಬು ಗಡ್ಡಪ್ಪನ್ಗಿಂತ ಜೋರ್ ಗುಂಡ್ ಪಾರ್ಟೀನ?
ಗುಂಡ: ಅದು ನೀನೇ ನಾಟಕ ನೋಡಿ ಡಿಸೈಡ್ ಮಾಡು. ಆದ್ರೆ ಈ ಗುಂಡ್ ಪಾರ್ಟಿಗಳು ದೊಡ್ಡ ವೇದಾಂತಿಗಳಿಗಿಂತ ಏನ್ ಕಮ್ಮಿ ಇಲ್ಲ ಅನ್ನೋದ್ ಮಾತ್ರ ಸತ್ಯಸ್ಯ-ಸತ್ಯ!

=================================================================================
ತಿಮ್ಮ: ಮಾಗಡಿ ಡೇಸ್-ನ್ನ TPK ಹೆಂಗ್ ಕರೆದಿರೋರು?
ಗುಂಡ: ಮಾಗ್ಡ್ದಿನ್ಗೋಳು
ತಿಮ್ಮ: RG?
ಗುಂಡ: ಮಮ್ಮಿ ಡ್ಯಾಡಿ!
ತಿಮ್ಮ: ಖುಜ್ಲೀವಾಲ್?
ಗುಂಡ: ಮಫ್ಲರ್ ಡೇಸ್!
ತಿಮ್ಮ: ನಮೋ?
ಗುಂಡ: ಮ್ಯಾಜಿಕ್ ಡೇಸ್!
ತಿಮ್ಮ: ಹುಚ್ಚ ವೆಂಕಟ್?
ಗುಂಡ: ದಿನಾ ಮಾಡಿ ನನ್ಮಗಂದ್!
ತಿಮ್ಮ: ಕಬಾಲಿ?
ಗುಂಡ: ಮಗಾಡಿ... ಮಗಾಡಿ ಡಾ!


=================================================================================
July25-2016:
ಗುಂಡ: ತಿಮ್ಮ, ನೀನೇನಾದ್ರೂ ಈಗ ಸಾರಿಗೆ ಸಚಿವ ಆಗಿದ್ರೆ ಏನ್ಮಾಡ್ತಾ ಇದ್ದೆ?
ತಿಮ್ಮ: ಆಗಿನ್ ಕಾಲದಲ್ಲಿ ರಾಜ ಮತ್ತೆ ಮಂತ್ರಿ ಮಾರುವೇಷದಲ್ಲಿ ಹೋಗಿ ಜನರ ಜೀವನವನ್ನ ನೇರವಾಗಿ ನೋಡಿ ಅವರಲ್ಲೊಬ್ಬರಾಗಿದ್ದು ಅವರ ಸಮಸ್ಯೆಗಳಿಗೆ ಸ್ಪಂದಿಸಿ ಬರ್ತಿದ್ರಲ್ಲ, ಹಾಗೇನೆ ಈಗ ಕಾರನ್ನ ಮನೇಲೆ ಬಿಟ್ಟು ಕರ್ನಾಟಕ ಪೂರ್ತಿ ಒಂದು ಸುತ್ತು ಹೊಡೆದು ಬರ್ತಾ ಇದ್ದೆ!
ಗುಂಡ: ಈಗೇನಾದ್ರೂ ನೀವು ಕಾರ್ ಮನೇಲೇ ಬಿಟ್ಟು ಹೋಗಿದ್ದಿದ್ರೆ ನೀವ್ ಸುತ್ತು ಹೊಡೆಯೋದಿರ್ಲಿ, ಜನಾನೆ ನಿಮ್ಗೆ ಸುತ್ತಾಡಿಸ್ಕೊಂಡ್ ಹೊಡ್ದಿರೋರು!
ತಿಮ್ಮ: ಹಂಗಂತೀಯ?
ಗುಂಡ: ಮತ್ತೆ, ಈಗ ಬಸ್ಸಿಲ್ದೆ ಪರ್ದಾಡೊ ಟೈಮಲ್ಲಿ ಮಳೆನೂ ಜೋರಾಗ್ಬಂದು ಜನರ ಕೋಪ ನೆತ್ತಿಗೇರ್ತಾ ಇದೆ. ಅದೂ ಅಲ್ದೆ ಈ ಪರಿಸ್ಥಿತಿ ಬರೋಕೆ ಯಾರ್ ಕಾರ್ಣ?
ನಿಮ್ಗೆ, 200-300% ಹೈಕ್ ಬೇಕು, ಕಷ್ಟಪಟ್ಟು ದಿನಾಗ್ಲು ಕೆಲ್ಸ ಮಾಡೊ ಮಂದಿಗೆ 35% ಹೈಕ್ ಕೊಡೋಕೂ ಸಾಯ್ತೀರ! ನಿಮ್ಗೆಲ್ಲಾ ಇನ್ನೊಂದ್ ಎಲೆಕ್ಷನ್‌ ಬಂದ್ರೇನೆ ಜನರ ಜ್ಙಾಪ್ಕ ಬರೋದು.
ತಿಮ್ಮ: ಬಸ್ಸಲ್ಲಿ ಓಡಾಡೊ ಜನ ಅಲ್ಪ ಸಂಖ್ಯಾತರು - ನಾನ್ ಹೇಳಿದ್ದು ಸಂಖ್ಯೇಲಿ - ಅಂತಹ ಒಂದೋ ಎರಡೋ ಓಟ್ಗೆಲ್ಲ ನಾವ್ ಕೇರ್ ಮಾಡೊಲ್ಲ!
ಗುಂಡ: ಒಂದೋ-ಎರ್ಡೋ ಓಟಾ? ಅಂಥ ಒಂದೊಂದು ಓಟ್ಗೂ ಎಷ್ಟ್ ಬೆಲೆ ಇದೆ ಅಂತ ತಿಳ್ಕೊಂಬೇಕಂದ್ರೆ ನಾಳಿದ್ನಾಟ್ಕ ಬಂದ್ನೋಡು - ರಂಗಶಂಕರದಲ್ಲಿ!
=================================================================================
July26-2016:
ತಿಮ್ಮ: (ಟಿವಿ ನ್ಯೂಸ್ ನೋಡುತ್ತಿದ್ದಾನೆ - Breaking News - ಐಬು ಕೈಗೆ ಬಸ್ ಕೊಟ್ಟ ಸರ್ಕಾರ, ಜನ ಹೆದರಿ ಚೆಲ್ಲಾಪಿಲ್ಲಿ! ಸಾರಿಗೆ ಬಸ್ ಸಂಚಾರ ಮತ್ತೆ ಬಂದ್.) ಇಂಥಾ ನ್ಯೂಸೆಲ್ಲಾ ಫೇಸ್ಬುಕ್ ಪೇಜಲ್ಲಿ ಸರ್ಕಾರ ಯಾಕೆ ಹಾಕೋಲ್ಲ?
ಗುಂಡ: ಇದನ್ನೆಲ್ಲಾ ಹಾಕೋಕೆ ನಮ್ಮ ಸಿಎಂ ಏನು ಮಾಗಡಿಯಿಂದ ಆಯ್ಕೆ ಆಗಿರೋ ಅನಂತ್ ಅಂದ್ಕೊಂಡ್ಯಾ?
ತಿಮ್ಮ: ಹಂಗಿದ್ರೆ ಮಾಗಡಿ ಡೇಸ್-ಸಿಎಂ ಹೆಸರು ಅನಂತ್ ಅಂತ ಆಯ್ತು!
=================================================================================
July27-2016 - Show Day - Magadi Express:
ತಿಮ್ಮ: (ನ್ಯೂಸ್ ಪೇಪರ್ ಜೋರಾಗಿ ಓದುತ್ತಿರುವನು)
ಮಾಗಡಿ ಕ್ಷೇತ್ರಕ್ಕೆ ಮರು ಚುನಾವಣೆ, ಮುಖ್ಯಮಂತ್ರಿ ಅಭ್ಯರ್ಥಿಗಾಗಿ ಅರ್ಜಿ ಆಹ್ವಾನ - ಹುದ್ದೆಯ ನಿಯಮಗಳು:
೧. ಆಗಾಗ ಎಲ್ಲೆಂದರಲ್ಲಿ ತೂಕಡಿಸಲು ಗೊತ್ತಿರಬೇಕು - ಸಂದರ್ಶನದ ಸಮಯದಲ್ಲಿ ತೂಕಡಿಕೆ ಕಡ್ಡಾಯ.
೨. ಆಗಾಗ ಪಕ್ಷಾಧ್ಯಕ್ಷರಿಗೆ ಬಾಯಿ ಮಾತಲ್ಲಾದರೂ ತಿಥಿ ಮಾಡಬೇಕು.
೩. ಇಂದಿನ ಪ್ರಧಾನಿಯ ಹೆಸರಿನ ಬದಲು ಹಿಂದಿನ ಪ್ರಧಾನಿಯ ಹೆಸರನ್ನೇ ಇಂದಿನವರೆಂದು ಪ್ರಸ್ತಾಪಿಸಬೇಕು.
೪. ಮಗುವಿನ ಮಾತಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡಬೇಕು. ತಾಯಿ ಮಕ್ಕಳಿಗೆ ಗೌರವ ಕೊಡಬೇಕು ಮತ್ತು ಪೂಜಿಸಬೇಕು.
೫. ಕೈ-ಬಾಯಿ ಚೆನ್ನಾಗಿರಬೇಕು - ಕೈ ವಾಚು ಕಟ್ಟೋಕೆ - ಬಾಯಿ - ನಿಮಗೆ ಗೊತ್ತಿರಬೇಕಲ್ವಾ?. ತಲೆಯೂ ಕೂಡ ಇರಲೇಬೇಕು - ಬುದ್ಧಿಯನ್ನು ಕಣ್ಣಿನಿಂದ ನೋಡಲು ಸಾಧ್ಯವಿಲ್ಲದಿರುವುದರಿಂದ ಅದರ ಅವಶ್ಯಕತೆ ಇರುವುದಿಲ್ಲ.
೬. ಕಾರ್ಮಿಕರ ಮೇಲೆ ಎಸ್ಮಾ ಜಾರಿಗೆ ಯಾವಾಗಲು ಸಿದ್ಧವಿರಬೇಕು ಮತ್ತು ಕಾರ್ಮಿಕರ ದಿನದಲ್ಲು ರಾಜ್ಯೋತ್ಸವ ಆಚರಿಸುವ ಸಂಪೂರ್ಣ ಸ್ವಾತಂತ್ರ್ಯವಿರುತ್ತದೆ.
೭. ಹಗ್ಗ ತಯಾರಿಸುವ ಸಂಪೂರ್ಣ ಜ್ಞಾನವಿರಬೇಕು.
೮. ಆಗಾಗ ಅರಿಯದೆ ಬರುವ ಚುಂಬನ ಸ್ವೀಕಾರ ಸ್ವಾತಂತ್ರ್ಯವಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ರಂಗಶಂಕರ - ಇಂದು ಸಂಜೆ ೭:೩೦.
ವಿ.ಸೂ.:
೧. ಸಾರಿಗೆ ಮುಷ್ಕರದ ಕಾರಣ ನೀಡಿ ಸಂದರ್ಶನವನ್ನು ತಪ್ಪಿಸಿಕೊಳ್ಳುವಂತಿಲ್ಲ.
೨. ರಂಗಶಂಕರದ ನಿಯಮಗಳು ಅನ್ವಯ.

=================================================================================
Sep27 - 2016:
(CM)X(CM)=E(Evolution of Cauvery Issue)
(CM)2=E
E=MC2
Entertainment = (MoreComedy)2
=================================================================================
Sep27 - 2016:
ಗುಂಡ: ಎಲ್ಲೋಗಿದ್ದ್ಯೋ ತಿಮ್ಮ? ಇಷ್ಟ್ ದಿನಾ ಅಡ್ರಸ್ಸ್ಗೇ ಇರ್ಲಿಲ್ಲ!
ತಿಮ್ಮ: ಈ ಕಾವೇರಿ ಗಲಾಟೇಲಿ ಮೈಸೂರ್ಗೋದವ್ನಿಗೆ ಬೆಂಗ್ಳೂರ್ಗೇ ಬರಕ್ಕಾಗ್ಲಿಲ್ಲ ನೋಡ್ಲಾ ಗುಂಡ.
ಗುಂಡ: ಅದಿರ್ಲಿ ಈಗ ಬರೋ ತಿಂಗ್ಳು 4 ಕ್ಕೆ ರಂಗಶಂಕರದಲ್ಲಿ E=MC2 ನಾಟಕ ಮತ್ತೆ ಬರ್ತಾ ಇದೆ, ಬಾರ್ಲಾ ಹೋಗೋಣ.
ತಿಮ್ಮ: ಈಗ ಕಾವೇರಿಗೆ ಅಂತ ಕರ್ನಾಟಕಾನೇ ಹತ್ಕೊಂಡ್ ಉರೀತಾ ಇರೋವಾಗ ನಾಟಕ ಬೇಕೇನೊ ನಿಂಗೆ ನಾಟಕ! ಆ ನಾಟಕಕ್ಕೂ ಕಾವೇರಿಗೂ ಏನಾದ್ರು ಒಂದ್ ಸಾಮ್ಯತೆ ಇದ್ರೆ ತೋರ್ಸ್ಬಿಡು, ಕಣ್ಮುಚ್ಚ್ಕೊಂಡ್ಬಂದ್ಬಿಡ್ತೀನಿ!
ಗುಂಡ: ತಿಮ್ಮ... ಕನ್ನಂಬಾಡಿ ಕಟ್ಟ್ದೋರು, ನಮ್ಮ ವಿಶ್ವೇಶ್ವರಯ್ಯನೋರು, ಒಬ್ಬ ದೊಡ್ಡ ಎಂಜಿನೀಯರು. ಕಾಕತಾಳೀಯ ಅನ್ನೋ ಹಾಗೆ ಈ ನಾಟಕದಲ್ಲಿ ಬರೋ ಕಿಶೋರ್ ಒಬ್ಬ ಎಂಜಿನೀಯರ್ (ಅಷ್ಟು ದೊಡ್ಡ ವ್ಯಕ್ತಿತ್ವ ಈ ಎಂಜಿನೀಯರ್ಗೆ ಇದೆ ಅಂತ ಹೇಳೋಕ್ಕಾಗೊಲ್ಲ). ಆದ್ರೆ ಇವ್ನು ತೊಂದರೆಗೆ ಸಿಕ್ಕಿ ಹಾಕ್ಕೊಂಡ ಮೇಲೆ ದಾಖಲಾಗೋದು ಕಾವೇರಿ ನದಿ ಪಾತ್ರದಲ್ಲಿ ಬರೋ ರಾಜ್ಯಕ್ಕೆ ಸೇರಿದ ಒಂದೂರಲ್ಲಿ! ಅದಲ್ಲದೆ ವಿಮೂವ್ ಥಿಯೇಟರ್ನ ಹಲವಾರು ಮಂದಿ ಕಾವೇರಿ ಸಮಸ್ಯೆಗೆ ಕೆಲವು ತಾಂತ್ರಿಕ ಮತ್ತೆ ಅನುಸರಿಸ್ಬಹುದಾದ ಮಾರ್ಗೋಪಾಯಗಳ್ನ ಕೊಟ್ಟಿದ್ದಾರೆ, ಅದನ್ನ ಇಲ್ಲಿ ಕೆಳಗಡೆ ನಾನು ಕೂಡ ನಮೂದ್ಸಿದ್ದೀನಿ. ಅದನ್ನೆಲ್ಲ ನೋಡಿ ಹೇಳು ಕಾವೇರಿಗೆ ನೀನೇನ್ಮಾಡ್ತಾ ಇದ್ದ್ಯ ಮತ್ತೆ ನಾಟಕಕ್ಕೆ ಬರ್ತಿದ್ದೀಯ ಅಥ್ವ ಇಲ್ವ ಅಂತ!

=================================================================================



Sep30 - 2016:
ತಿಮ್ಮ: ಈ ಅಭಿಷೇಕ್-ಗೂ (Abhishek Iyengar) ಷೇಕ್-ಸ್ಪಿಯರ್-ಗೂ ಏನಾದ್ರೂ ಸಾಮ್ಯತೆ ಇದ್ಯಾ ಗುಂಡ?
ಗುಂಡ: ಷೇಕ್-ಸ್ಪಿಯರ್ ಈಗ ಬದುಕಿದ್ದು ನಾಟಕ ಏನಾದ್ರೂ ಡೈರೆಕ್ಟ್ ಮಾಡಿದ್ದಿದ್ರೆ ಹೇಗಿರ್ತಿತ್ತೊ ಗೊತ್ತಿಲ್ಲ, ಆದ್ರೆ ಆಡಿಯನ್ಸ್ ಇವರಬ್ಬರಲ್ಲಿ ಯಾರು ಬರೆದಿರೋ ನಾಟಕ ನೋಡಿದ್ರೂ 'ಷೇಕ್' ಆಗೋದಂತು ಗ್ಯಾರಂಟಿ!
=================================================================================
Nov21 - 2016:
ಹುಲಿ ಘರ್ಜನೆ ಹೇಗಿರುತ್ತೆ ಕೇಳಿದ್ದೀರಲ್ಲಾ? ಅದೇ ಹುಲಿ ತನ್ನ ಬೇಸ್ ವಾಯ್ಸ್ನಲ್ಲಿ ಮಾತಾಡಿದ್ರೆ ಹೇಗಿರುತ್ತೆ ಅಂತ ಕೇಳ್ಬೇಕಾ? ಅನಾವರಣಕ್ಕೆ ಇದೇ ಗುರುವಾರ ಬನ್ನಿ. ಎಲ್ಲಿ ಅಂತ ಕೇಳಿದ್ರಾ? ನಮ್ಮ ಶಂಕ್ರಣ್ಣನ ಜ್ಞಾಪಕಾರ್ಥವಾಗಿ ಕಟ್ಟಿರೋ ರಂಗಮಂದಿರದಲ್ಲಿ! ಅದೇ, ನಮ್ಮ ರಂಗ-ಪುಣ್ಯಕ್ಷೇತ್ರ ರಂಗಶಂಕರದಲ್ಲಿ ಚೊಚ್ಚಲ ಪ್ರದರ್ಶನ.
=================================================================================
Nov23 - 2016:
ಹಣ ಬೇಕಂದ್ರೆ, ATM
ಮನರಂಜನೆ ಬೇಕಂದ್ರೆ, ಅನಾವರಣ

=================================================================================
Nov23 - 2016:
ಮೋದಿಯಿಂದ ಕಪ್ಪು ಹಣದ ಅನಾವರಣ!
ದೇಶವೇ ಹೊಸ ಅನಾವರಣದ ಗುಂಗಿನಲ್ಲಿರುವಾಗ,
ನಾಳೆ ರಂಗಶಂಕರದಲ್ಲೊಂದು
ಅನಾವರಣ!
ಶನಿವಾರ ಕಲಾಗ್ರಾಮದಲ್ಲಿ
ಮತ್ತೊಂದು ಅನಾವರಣ!
ಎಲ್ಲರೂ ತಪ್ಪದೆ ಬನ್ನಿ.

=================================================================================
Nov24 - 2016:
ನಾವು ಎಷ್ಟೇ ದುಡ್ಡು ಮಾಡಿದ್ದ್ರೂ ಕೊನೆಗೆ ಮಲಗೋದು 3X6 ರಲ್ಲಿ!
ಹೊರಗೆ ಎಷ್ಟೇ ದೊಡ್ಡ ಮನರಂಜನಾ ವಿಧಾನಗಳಿದ್ದ್ರೂ,
ಕೊನೆಗೆ ಜನ ಸೇರೋದು ವಿಮೂವ್ ಅನ್ನೋ 3 ಅಕ್ಷರದ ನಾಟಕ ಕಂಪೆನಿ ಅನಾವರಣಗೊಳಿಸ್ತಾ ಇರೊ
6 ಪ್ರಮುಖ ಪಾತ್ರಗಳಿರೋ ನಾಟಕಕ್ಕೆ!

=================================================================================
Nov26-2016:
ನೀವು Friends ಇದ್ದೀರಾ? ಹೆಚ್ಚಿಗೆ ದುಡ್ಡಿಲ್ಲ, ಅನಾವರಣಕ್ಕೆ ಹೆಂಗ್ ಹೋಗ್ಲಪ್ಪಾ ಅಂತ ಪರದಾಟಾನಾ? ಇವತ್ ಒಂದ್ಸಲ ಹೋಗಿ ನೋಡಿ, Friends ಜೊತೆ ಈ ನಾಟಕ ನೋಡೋ ಅವಕಾಶ ಉಪಯೋಗಿಸಿಕೊಂಡು ಇರೋ ಕಡಿಮೆ ದುಡ್ಡಿಂದ ಒಳ್ಳೆ entertainment ಸಿಕ್ತಲ್ಲಪ್ಪ ಅಂತ ನೀವೇ ಅಂದ್ಕೊಂತೀರ.
=================================================================================
Jan18-2017:
ನೀವು ಇವತ್ತು ಕಾಫಿ/ಟೀ ಏನಾದ್ರು ಕುಡ್ದ್ರಾ? ಕಾಫಿ ಅಥವಾ ಟೀ ಮಾಡೋಕೆ ಹಾಲು ಬೇಕಾಗುತ್ತೆ. ಹಾಲು ಬೆಳ್ಳಗಿರುತ್ತೆ. ಬಿಳಿ ಅಂದ್ರೆ ಸತ್ಯ. ಸ್ನೇಹಿತರ ಮಧ್ಯೆ ನಡೆಯೊ ಸತ್ಯದ ಅನಾವರಣ ನೋಡ್ಬೇಕು ಅಂದ್ರೆ ಮುಂದಿನ ವಾರ 26ಕ್ಕೆ ರಂಗಶಂಕರಕ್ಕೆ ಬನ್ನಿ.

ವಿಶೇಷ ಸೂಚನೆ:
ಮೇಲೆ ಹೇಳಲಾಗಿರುವ 'ಕಾಫಿ' ಮತ್ತು 'ಟೀ'ಗೂ, ಗುರುಪ್ರಸಾದ್ ಮತ್ತು ಉಪೇಂದ್ರರಿಗೂ ಯಾವುದೇ ಸಂಬಂಧವಿರುವುದಿಲ್ಲ. ಬೇಕಾದಲ್ಲಿ 'ಎರಡನೇ ಸಲ' ನೋಡಿ, ಆ ರೀತಿ ಏನೂ ಹೇಳಿಲ್ಲ!
=================================================================================
Jan18-2017:
ತಿಮ್ಮ: ನಾನು ಖಂಡಿಸ್ತೀನಿ. ನಾನು ಇದನ್ನ ಬಲವಾಗಿ ಖಂಡಿಸ್ತೀನಿ.
ಗುಂಡ: ಯಾಕ್ಲ ತಿಮ್ಮ ಏನಾಯ್ತೊ? ಎಲ್ಲಾರ್ಗು ಹತ್ತಿರೊ ಬಿಗ್ಬಾಸ್ ಪ್ರಥಮನ ಖಾಯಿಲೆ ನಿಂಗು ಅಂಟ್ಕೊಂತ ಹೆಂಗೆ?
ತಿಮ್ಮ: ಮತ್ತಿನ್ನೇನ್ ಗುಂಡ, ನಾವು ನಾಟಕಗಳ ಬಗ್ಗೆ ಮಾತಡಕ್ಕೆ ಶುರು ಹಚ್ಕೊಂಡು ಸುಮಾರು 9 ತಿಂಗಳು ಮೇಲಾಗ್ತಾ ಬಂತು, ಅನಾವರಣ ನಾಟಕ ನೋಡ್ಕೊಂಡ್ಬಂದು 2 ತಿಂಗಳಾಗ್ತಾ ಬಂತು, ನಾಟಕದ ಬಗ್ಗೆ ಒಂದಾದ್ರೂ ಮಾತಾಡಿದ್ದೀವ? ಅದಕ್ಕೆ, ಇದನ್ನ ನಾನು ಬಲ(ವಂತ)ವಾಗಿ ಖಂಡಿಸ್ತೀನಿ.

ಗುಂಡ: ಮೊದಲಾದ್ರೆ ನಾಟಕ ನೋಡಿರ್ಲಿಲ್ಲ, ಮಾತಾಡ್ಲಿಲ್ಲ, ಈಗ ನೋಡಿದ್ದೀವಲ್ಲ, ಅದಕ್ಕೇನಂತೆ ಮಾತಾಡೋಣ ಹೇಳು.
ತಿಮ್ಮ: ಈಗ ನೋಡು ಗುಂಡ, ಅನಾವರಣದ ಗೆಲುವು ಪ್ರತಿಯೊಬ್ಬ ಕನ್ನಡಿಗನ ಗೆಲುವಾಗುತ್ತೆ!
ಗುಂಡ: ಇವನನ್ನೇನ್ ಮಾಡೋದು ಈವಾಗ? ಮತ್ ಶುರು ಹಚ್ಕೊಂಡ್ನಲ್ಲಪ್ಪ ಪ್ರಥಮ್ ರಾಗಾನ!
ತಿಮ್ಮ: ಸರಿ, ವಿಷ್ಯಕ್ ಬರೋಣ. ಹೌದು, ಬಿಗ್ಬಾಸ್ಸ್ನಲ್ಲಿ ಎಲ್ಲಾ ಸ್ಕ್ರಿಪ್ಟೆಡ್ ಅಂತೆ!
ಗುಂಡ: ಲೇಯ್ ತಿಮ್ಮ, ನೀನೇನು ನಾಟಕದ ಬಗ್ಗೆ ಮಾತಾಡೋಕೆ ಬಂದ್ಯೊ ಅಥ್ವ ಬಿಗ್ಬಾಸ್ ಬಗ್ಗೆ ಮಾತಾಡೋಕ್ ಬಂದ್ಯೊ? ಇಲ್ನೋಡು, ಬಿಗ್ಬಾಸ್ ಸ್ಕ್ರಿಪ್ಟೆಡ್ಡೊ ಅಥ್ವ ರಿಯಲ್ಲೊ ನನಗ್ಗೊತ್ತಿಲ್ಲ, ಆದ್ರೆ ಅನಾವರಣ ನಾಟಕ ಅಂತು ಸ್ಕ್ರಿಪ್ಟೆಡ್. ಬರೆದೋರು ನಮ್ಮ ಅಭಿಷೇಕ್ ಅಯ್ಯಂಗಾರ್.
=================================================================================
Jan18-2017:
ತಿಮ್ಮ: (ಗಟ್ಟಿಯಾಗಿ ನ್ಯೂಸ್ ಪೇಪರ್ ಓದುತ್ತಿದ್ದಾನೆ) "ರಾಹುಲ್ ಗಾಂಧಿಯಿಂದ ಬಡತನದ ಪರಿಸ್ಥಿತಿಯ ಅನಾವರಣ. ತಮ್ಮ ಕುರ್ತಾದ ಹರಿದ ಜೇಬಿನಿಂದ ಕೈ ಪ್ರದರ್ಶನ". ಏನ್ಲಾ ಗುಂಡ? ನಮ್ಮ ಯುವರಾಜರ ಹತ್ತ್ರ ಜೇಬಿಗೆ ತೇಪೆ ಹಾಕಿಸ್ಕೊಳ್ಳೋ ಅಷ್ಟೂ ದುಡ್ಡಿಲ್ವ?

ಗುಂಡ: ರಾಹುಲ್ ಗಾಂಧಿ ಹತ್ತ್ರ ಅಷ್ಟ್ ದುಡ್ಡಿದ್ಯೋ ಇಲ್ವೊ ನನಗ್ಗೊತ್ತಿಲ್ಲ, ಆದ್ರೆ ನಮ್ಮ ಭಾರತದ ಜನ ಅಂತು ಅವರ ಹತ್ತ್ರ ದುಡ್ಡಿಲ್ಲ ಅಂದ್ರೂ ಸಹ ಈ ರೀತಿ ಬಡತನದ ಪ್ರದರ್ಶನ ಮಾಡಲ್ಲ. ಇದು ನಿನಗೆ ಅರ್ಥ ಆಗ್ಬೇಕು ಅಂದ್ರೆ ಮುಂದಿನ ವಾರ 26ಕ್ಕೆ ರಂಗಶಂಕರಕ್ಕೆ ಬಾ.
=================================================================================
Jan23-2017:
ಗುಂಡ: 'ಲೈಕ್' ಅನ್ನೋ ಪದ ಯಾವ ಭಾಷೆಯಲ್ಲಿದೆ ಗೊತ್ತಾ?
ತಿಮ್ಮ: ಅಷ್ಟೂ ಗೊತ್ತಿಲ್ವ? ಇಂಗ್ಲೀಷ್.
ಗುಂಡ: ಇಂಗ್ಲೀಷ್-ನಲ್ಲಿದೆ, ಹೌದು. ಆದ್ರೆ ಅದೇ ಪದ ಕುಂದಾಪುರದ ಕನ್ನಡದಲ್ಲಿದೆ ಕಣ್ಲ. ಕುಂದಾಪುರದ ಕನ್ನಡಕ್ಕೆ ಕುಂದಗನ್ನಡ, ಹವಿಗನ್ನಡ ಅಥವಾ ಹವ್ಯಕ್ ಕನ್ನಡ ಅಂತಾನೂ ಕರೀತಾರೆ. ಈ ಇಂಗ್ಲೀಷ್ನವರೇನಾದ್ರೂ ಲೈಕ್-ನ ಕುಂದಗನ್ನಡದಿಂದ ಕಾಪಿ ಮಾಡಿದ್ದಾರಾ ಅಂತ.
ತಿಮ್ಮ: ಕುಂದಗನ್ನಡದ 'ಲೈಕ್' ಅಂದ್ರೆ ಏನು?
ಗುಂಡ: ಇಷ್ಟ ಅಂತಾನೆ ಅರ್ಥ! 
ತಿಮ್ಮ: ಸರಿ, ಈವಾಗ ಕುಂದಾಪುರದ ಕನ್ನಡದ ಬಗ್ಗೆ ಯಾಕೆ ಮಾತ್ಬಂತು?
ಗುಂಡ: ಅನಾವರಣ ನಾಟಕದಲ್ಲಿ ಒಂದು ಪಾತ್ರ ಅಂತು ಪೂರ್ತಿ ಹವಿಗನ್ನಡದಲ್ಲೇ ಮಾತಾಡುತ್ತೆ ಕಣ್ಲ!
ತಿಮ್ಮ: ಈಗ, ನಾಟಕ ಪೂರ್ತಿ ಅರ್ಥ ಆಗ್ಬೇಕು ಅಂದ್ರೆ ಕುಂದಾಪುರದ ಕನ್ನಡನೂ ಕಲಿತು ಹೋಗ್ಬೇಕ ನಮ್ಜನ ಹಂಗಾದ್ರೆ?
ಗುಂಡ: ಲೇ ತಿಮ್ಮ, ನಾನ್ಹೇಳೋದೇನಂದ್ರೆ ನಮ್ಜನ ಬೇರೆ ಎಲ್ಲಾ ಭಾಷೆ ಕಲಿಯೋದಕ್ಕೂ ‌ಮೊದಲು ನಮ್ಮ ಕರ್ನಾಟಕದ ಎಲ್ಲಾ ಭಾಷೆಗಳ್ನೂ ಕಲಿತ್ರೆ ಒಳ್ಳೇದು. ಆದ್ರೂ ಕೂಡ ನಾಟಕ ಅರ್ಥ ಆಗೋಕೆ ಭಾಷೆ ಬೇಕಿಲ್ಲ ಕಣ್ಲ, ಭಾವ ಬೇಕು ಅಷ್ಟೆ.

=================================================================================
Jan23-2017:
ಒಂದು ಸುಂದರವಾದ ಪೈಂಟಿಂಗ್ ಬರೋದಕ್ಕಿಂತ ಮುಂಚೆ ಬಿಳಿ ಕ್ಯಾನ್ವಾಸ್ ಖಾಲಿಯಾಗಿ ಕಲಾವಿದನ ಒಳಗಿರುವ ಚಿತ್ರದ ಅನಾವರಣಕ್ಕಾಗಿ ಕಾದು ಕೂತಿರುತ್ತೆ. ಅನಾವರಣದ ಅನಾವರಣಕ್ಕಾಗಿ ಈಗ ಎರಡನೇ ಬಾರಿ ಕಾದು ಕುಳಿತಿರುವ ರಂಗಶಂಕರದಲ್ಲಿ ಮೂಡುವ ನಾಟಕ ಚಿತ್ರ, ರಂಗದ ಮೇಲೆ ತಾತ್ಕಾಲಿಕ, ಆದರೆ ಬಂದ ಪ್ರೇಕ್ಷಕನ ಮನದಲ್ಲಾಗುವ ಅನಾವರಣ ಶಾಶ್ವತ! ನಿಮ್ಮ ಅನಾವರಣಕ್ಕೆ ನೀವು ತಯಾರಾ?

- ಸಿ.ಎಂ.ರವಿರವರ "ಅತೀಂದ್ರಿಯ ದೃಶ್ಯಾವಳಿ" ಲೇಖನದಿಂದ ಪ್ರೇರಿತ.
=================================================================================
Feb10-2017:
ಎಂಟಕ್ಷರದ ನಾಟಕಕಾರ ಬರೆದ
ಒಂಭತ್ತು ಪಾತ್ರದ ಕಥೆಯಲಿ
ಆರು ಸ್ನೇಹಿತರು ಬಿಚ್ಚಿಡುವ
ಸತ್ಯದ ಕಥೆಯನು ಮೂರಕ್ಷರದ
ನಿರ್ದೇಶಕನು ನೂರಾರು ಪ್ರೇಕ್ಷಕರ
ಮುಂದೆ ಐದಕ್ಷರದ ನಾಟಕ ಮಂದಿರದಲಿ
ನಾಲ್ಕಕ್ಷರದ ವಾರದಂದು
ಪ್ರದರ್ಶಿಸುತ್ತಿರುವ ಕಥೆಯೇ,
ಈ ಐದಕ್ಷರದ ಅನಾವರಣ!

ಪದ ವಿವರಣೆ:
ಎಂಟಕ್ಷರದ ನಾಟಕಕಾರ: ಅಭಿಷೇಕ್ ಅಯ್ಯಂಗಾರ್
ಮೂರಕ್ಷರದ ನಿರ್ದೇಶಕ: ರಂಜನ್
ಐದಕ್ಷರದ ನಾಟಕ ಮಂದಿರ: ಕಲಾ ಪೂರ್ಣಿಮ
ನಾಲ್ಕಕ್ಷರದ ವಾರ: ಶನಿವಾರ
=================================================================================
Feb11-2017:
ತಿಮ್ಮ: ನಂಗೆ ನಾಟಕ ನೋಡ್ಬೇಕು ಅನ್ನಿಸ್ತಿದೆ, ನೀನು ಇತ್ತೀಚೆಗೆ ನೋಡಿದ ಯಾವ್ದಾದ್ರು ನಾಟಕದ ಬಗ್ಗೆ ಹೇಳೊ.
ಗುಂಡ: "ಲೋಕ ಶಕುಂತಲಾ" - ಅಂತರಂಗ ತಂಡದ ನಾಟಕ
ತಿಮ್ಮ: ಹೌದೇನೊ ಗುಂಡ, ಈ ನಾಟಕದಲ್ಲಿ ಎತ್ಕೊಂತಾನೆ ಸಂಸ್ಕೃತ ಶುರುವಾಗುತ್ತಂತೆ!
ಗುಂಡ: ಹೌದು ಕಣೊ ಗುಂಡ, ಶುರುವಾಗ್ತಾ ಸಂಸ್ಕೃತ, ಆದ್ರೆ ಆಮೇಲೆ ಕನ್ನಡದಲ್ಲೇ ಇರುತ್ತೆ ಕಣ್ಲ. ಈ ನಾಟಕ ಬರೆದೋರು ನಮ್ಮ ನೀಲಕಂಠೇಶ್ವರ ನಾಟ್ಯ ಸೇವಾ ಸಂಘದ ಕೆ.ವಿ.ಸುಬ್ಬಣ್ಣ, ಕಣ್ಲ.
ತಿಮ್ಮ: ಅದೇ ಮೊನ್ನೆ ನಮ್ಮ ಆಕಾಶ್ ಶ್ರೀವತ್ಸ Wemove whitewall film festivalನಲ್ಲಿ ಹೇಳ್ತಾ ಇದ್ರಲ್ಲ - ಕಮಲ್ ಹಾಸನ್ ಸರ್ರು ಸಂದರ್ಶನ ಒಂದರಲ್ಲಿ, ನೀವು ಹೊಸಬರು ನಟನೆ ಕಲೀಬೇಕು ಅಂದ್ರೆ ಯಾವ ಪುಸ್ತಕ ಸೂಚಿಸ್ತೀರ ಅಂತ ಕೇಳಿದ್ದಕ್ಕೆ - Constantin Stanislavski ಬರೆದಿರೊ "An actor prepares" ಅಂದ್ರಂತೆ. - ನಾನು ಇಷ್ಟೆಲ್ಲಾ ಯಾಕಪ್ಪಾ ಹೇಳ್ದೆ ಅಂದ್ರೆ, ಕೆ.ವಿ.ಸುಬ್ಬಣ್ಣನವರು ಇದೇ ಪುಸ್ತಕವನ್ನ ಕನ್ನಡದಲ್ಲಿ "ರಂಗದಲ್ಲಿ ಅಂತರಂಗ" ಅಂತ ಭಾವಾನುವಾದ ಮಾಡಿದ್ದಾರೆ ಕಣ್ಲ!
ಗುಂಡ: ನಾನು ಕಂಡಿರೋ ವಿಷಯ ಹೇಳ್ತಿದ್ದೀನಿ ಕೇಳು ಕಣ್ಲ - ಕೆ.ವಿ.ಸುಬ್ಬಣ್ಣನವರು ಬರೆದಿರೋ ಲೋಕಶಕುಂತಲ ನಾಟಕವನ್ನ ಅಂತರಂಗ ತಂಡದವರು ರಂಗದಲ್ಲಿ ತಮ್ಮ ಅಂತರಂಗವನ್ನಿಟ್ಟು ಅಭಿನಯಿಸ್ತಿರೋದಂತು ಖಂಡಿತ. ನಾಟ್ಯಶಾಸ್ತ್ರದ ಬಳಕೆಯಂತು ಈ ನಾಟಕದಲ್ಲಿ ಸಮಯೋಚಿತವಾಗಿ ಆಗೈತೆ ಕಣ್ಲ. Also, synchronization during Bharata Natyam is excellent between the dancers with the musical beats of Mrudangam. ಹಾಗೇನೆ ಸಂದರ್ಭಕ್ಕೆ ತಕ್ಕ ಹಾಗೆ ಹಾಸ್ಯ, ನಾಟಕವನ್ನ ಮತ್ತಷ್ಟು ಮನರಂಜಕವಾಗಿಸ್ತದೆ. ಇದರ ನಿರ್ದೇಶಕರು ಈಗಿನ ನೀನಾಸಂ ಪ್ರಾಂಶುಪಾಲರಾಗಿರೊ 'ಚಿದಂಬರ ರಾವ್ ಜಂಬೆ' ಕಣ್ಲ. ಇನ್ನೂ ಯಾಕ್ ತಡಮಾಡೀಯೆ? ಇದೇ ತಿಂಗಳ ಪ್ರೇಮಿಗಳ ದಿನ ಮತ್ತೆ ಮುಂದಿನ ದಿನ ಸಂಜೆಗೆ ರಂಗಶಂಕರಕ್ಕೆ ಬಂದ್ಬಿಡು.


===============================================================================
Feb 21 - 2017:    

ತಿಮ್ಮ: ಗುಂಡ, ನಿನ್ನ ಈ ವಾರದ plan ಏನು?
ಗುಂಡ: ಗುರುವಾರ ಹೆಬ್ಬುಲಿ ದರ್ಶನ!
ಶುಕ್ರವಾರ, ಹೆಬ್ಬುಲಿ ಜೊತೆ ಹೋಗಿ ಶ್ರೀನಿವಾಸ ಕಲ್ಯಾಣ ನೋಡ್ಕೊಂಡು ಬರೋದು!
ಶನಿವಾರ, ಹೆಬ್ಬುಲಿ ಜೊತೆ ಹೋಗಿ ಶ್ರೀನಿವಾಸ ಕಲ್ಯಾಣ ನೋಡ್ಕೊಂಡು ಹಂಗೆ ಬರ್ತಾ ಹುಲಿ ಘರ್ಜನೆ ಕೇಳ್ಕೊಂಡು ಮನೇಗ್ಬರೋದು!
ತಿಮ್ಮ: ಶನಿವಾರ, ಹೆಬ್ಬುಲಿ ಜೊತೆ ಶ್ರೀನಿವಾಸ ಕಲ್ಯಾಣ OK, ಆದ್ರೆ ಹುಲಿ ಘರ್ಜನೆ ಅರ್ಥ ಆಗ್ಲಿಲ್ಲ...
ಗುಂಡ: ಸಿವ್ನೇ! ಇನ್ನೆಂಗ್ಲಾ ಇವಂಗೆ ಬಿಡಿಸಿ ಹೇಳೋದು? ಅದೇ ಕಣ್ಲ - ಅಭಿಷೇಕ್  ಅಯ್ಯಂಗಾರ್ ಬರೆದ ಅನಾವರಣ - ಅದ್ರಲ್ಲಿ ನಮ್ ಹುಲಿ ಕಿಶೋರ್ ಸರ್ voice ಕೊಟ್ಟಿರಿಲ್ವ!
#ಹೆಬ್ಬುಲಿ #ಶ್ರೀನಿವಾಸಕಲ್ಯಾಣ #ಅನಾವರಣ

=================================================================================
Feb 23 - 2017:   
ಬನ್ನಿ ಬನ್ನಿ ನೀವು ಬನ್ನಿ
ಹುಲಿಯ ಘರ್ಜನೆ ಕೇಳೆ ಬನ್ನಿ
ಮನರಂಜನೆಗಾಗಿ ಬನ್ನಿ
ಕಲಾಪೂರ್ಣಿಮೆಗೆ ಬನ್ನಿ
ಕಾಲೇಜು ದಿನಗಳ ನೆನೆಯೆ ಬನ್ನಿ
ಸ್ನೇಹಿತರ ಜೊತೇಲಿ ಬನ್ನಿ
ಸ್ನೇಹದರ್ಥವ ತಿಳಿಯೆ ಬನ್ನಿ
ತಿಳಿದು ಅರಿಯಲು ಒಡನೆ ಬನ್ನಿ
ಎಡ ಬಲಗಳ ದಾಟಿ ಬನ್ನಿ
ನಾಟಕ ನೋಡಲು ಬನ್ನಿ
ಬನ್ನಿ ಬನ್ನಿ ನೀವು ಬನ್ನಿ
ಅನಾವರಣಕ್ಕಾಗಿ ಬನ್ನಿ!
=================================================================================
Feb 24 - 2017:  
ಸ್ವಾಗತ, ಸುಸ್ವಾಗತ
ನಾಳಿ‌ನ ಅನಾವರಣಕ್ಕೆ
ಗೆಳೆಯರೆಲ್ಲರಿಗೂ
ಸ್ವಾಗತ. ಹುಲಿ ಧ್ವನಿ ಬರುತ್ತೆ, ಆದ್ರೆ ಭಯ ಪಡಬೇಕಿಲ್ಲ, ಏಕಂದ್ರೆ ಅದು ಪ್ರೀತಿಯ ಕೂಗು.‌.. 

================================================================================= 
Feb 24 - 2017: 
#ಹೆಬ್ಬುಲಿ ನೋಡಿದೆ!
ಹೆಬ್ಬುಲಿ ಬಂದಿರೋದು,
ನಮ್ಮ ರಕ್ಷಣೆಗೆ ಅನ್ನಿಸ್ತು!
#ಹೆಬ್ಬುಲಿ ರಕ್ಷಣೇಲಿ 
#ಶ್ರೀನಿವಾಸಕಲ್ಯಾಣ ನೋಡ್ಕೊಂಡು
ನಾಳೆ ಹುಲಿ ಘರ್ಜನೆ ಕೇಳೋಕೆ
ಬಂದ್ಬಿಡಿ, ಆಯ್ತಾ? 
ನಾನೀಗಾಗ್ಲೆ ಹೇಳಿದ್ಹಾಗೆ
ನಮ್ಮ ಹುಲಿಯ ಕೂಗು
#ಅನಾವರಣ ತಂಡವನ್ನ ಹಾರೈಸೋಕೆ,
ಪ್ರೀತಿಯ ಕೂಗು...
=================================================================================
Feb-28 2017:

A long one but try to read - Its a work of fiction and not related to any real events. If it appears to be so, its only a mere co-incidence.
(ನಾಟಕ ಶುರುವಾಗಿ 10 ನಿಮಿಷ ಆದ ನಂತರ, ತಿಮ್ಮ ಬಂದು ರಂಗಮಂದಿರದ ಬಾಗಿಲು ಬಡಿಯುತ್ತಿದ್ದಾನೆ, ಬಾಗಿಲಲ್ಲೇ ಒಳಗೆ ನಿಂತಿದ್ದ ಗುಂಡ ಹೊರಗೆ ಬಂದು ಮತ್ತೆ ಬಾಗಿಲು ಮುಚ್ಚಿ ಮಾತಿಗಿಳಿಯುತ್ತಾನೆ.)
ಗುಂಡ: ಸರ್, ನಾಟಕ ಶುರುವಾಗಿ ಅದಾಗಲೇ ಹತ್ತು ನಿಮಿಷ ಆಯ್ತು, ಒಳಗಡೆ ಬಿಡೋಕಾಗೊಲ್ಲ.
ತಿಮ್ಮ: ಯಾಕ್ರೀ ಬಿಡಲ್ಲ? ಎಷ್ಟು ದೂರದಿಂದ ಕಷ್ಟಪಟ್ಟು ಇದಕ್ಕೆ ಅಂತಾನೆ ಬಂದಿದ್ದೀವಿ, ನಮ್ಮನ್ನ ಬಿಡಲ್ಲ ಅಂತೀರ? ನಾವೇನ್ ಟಿಕೆಟ್ ತೊಗೊಳ್ದೆ ಬಿಟ್ಟಿ ಬಂದಿದ್ದೀವ ಇಲ್ಲಿ? ಈ ಟ್ರಾಫಿಕ್ಕಲ್ಲಿ, ಟೆನ್ಷನ್ ತೊಗೊಂಡು, ಗಾಡಿ ಓಡ್ಸೋದಲ್ದೆ, ಪೆಟ್ರೋಲ್ ಬೇರೆ ಸುಟ್ಕೊಂಡು ಬಂದ್ರೆ, ಮರ್ಯಾದೆನೇ ಇಲ್ದೆ ಬಾಗ್ಲಲ್ಲಿ ನಿಲ್ಸಿ ಮಾತಾಡ್ಸೋದಲ್ದೆ, ಒಳಕ್ಕೆ ಬಿಡಲ್ಲ ಅಂತೀರ? ಅಲ್ರೀ ವಯಸ್ಸಾದ ಅಪ್ಪ, ಅಮ್ಮ ನನ್ನ ಜೊತೇಲಿ, ಎಷ್ಟೋ ದಿನ ಆದ್ಮೇಲೆ ಮೊದಲ್ನೇ ಸಲ ನಾಟಕ ನೋಡ್ಬೇಕು ಅಂತ ಬಂದಿದ್ದಾರೆ, ಅವರ ವಯಸ್ಸಿಗಾದ್ರು ಚೂರು ಮರ್ಯಾದೆ ಬೇಡ್ವ? ವಿದ್ಯಾವಂತರಾಗಿ, ದೊಡ್ಡ ಡೈರೆಕ್ಟರು ಅನ್ನಿಸ್ಕೊಂಡಮೇಲೆ ಮನುಷ್ಯತ್ವ ಅಂದ್ರೆ ಏನು ಅನ್ನೋದನ್ನೆ ಮರೆತು ಬಿಟ್ರ? ಥೂ, ನಿಮ್ಮ ಜನ್ಮಕ್ಕಿಷ್ಟು... ನಿಮ್ಮ ನಾಟಕಕ್ಕೊಂದು ದೊಡ್ಡ ನಮಸ್ಕಾರ, ಇನ್ಮುಂದೆ ನಿಮ್ಮ ನಾಟಕದ ಕಡೆ ತಲೆ ಹಾಕಿದ್ರೆ ಕೇಳ್ರಿ. ತಗೊಳ್ರಿ ನಿಮ್ ಟಿಕೆಟ್! (ಅಂತ ಟಿಕೆಟನ್ನ ಮುದುರಿ ಗುಂಡನ ಮೇಲೆ ಎಸೀತಾನೆ, ತಿಮ್ಮ.)
ಗುಂಡ: ಸರ್ ನೀವು ಇಲ್ಲಿ ನಿಂತು ಕಿರುಚಾಡಿದ್ರೆ ಶೋಗೆ ತೊಂದರೆ ಆಗುತ್ತೆ, ದಯವಿಟ್ಟು ಆಕಡೆ ಬನ್ನಿ ಸಾರ್ ಮಾತಾಡೋಣ. (ಅಂತ ಗುಂಡ ಕೇಳಿಕೊಂಡು, ದೂರ ಕರೆದುಕೊಂಡು ಹೋಗ್ತಾನೆ, ತಿಮ್ಮ ಮತ್ತು ಅವನ ಜೊತೆಯಲ್ಲಿದ್ದವರು ಬಿರುಸಾಗಿ ಆ ಕಡೆ ನಡೆದುಕೊಂಡು ಹೋಗ್ತಾರೆ).
ತಿಮ್ಮ: ಇನ್ನೇನ್ರಿ, ನಿಮ್ಮ ಹತ್ತಿರ ಮಾತಾಡೋದು? ದುಡ್ಡು ಕೊಟ್ಟು ಟಿಕೇಟ್ ತಗೊಂಡು ಬಂದ್ರೆ, ಮರ್ಯಾದೆನೆ ಕೊಡ್ದೆ ಮಾತೋಡೊ ನಿಮ್ಹತ್ರ ಏನ್ರೀ ಮಾತು? ಸುಮ್ನೆ ಬಾಯ್ಮುಚ್ಕೊಂಡು ನಮ್ಮ ದುಡ್ಡು ನಮ್ಗೆ ವಾಪಸ್ ಕೊಡ್ರಿ...
ಗುಂಡ: ಸರ್, ಶೋಗೆ ತಡವಾಗಿ ಬಂದಿದ್ದು ನಿಮ್ಮ ತಪ್ಪು, ರಂಗಭೂಮಿ - ನಾಟಕ ಅಂದ್ರೆ, ಸಿನೆಮಾ ತರ ಅಲ್ಲ! ಸಿನೆಮಾಗೆ ಕೂಡ ನೀವು ಲೇಟಾಗಿ ಹೋದ್ರೆ ಅದಾಗ್ಲೇ ಬಂದು ಕುಳಿತು ತಲ್ಲೀನರಾಗಿ ನೋಡ್ತಾ ಇರೊ ಜನ ವಿಚಲಿತರಾಗಿ ನಿಮ್ಮನ್ನ ನೋಡ್ಕೊಂಡು ಸಿನೆಮಾದ ಪ್ರಮುಖ ದೃಶ್ಯವನ್ನೇ ಮಿಸ್ ಮಾಡ್ಕೊಳ್ಬೇಕಾಗಿ ಬರಬಹುದು. ಅಂತಹದರಲ್ಲಿ, ನಾಟಕದ ವಿಷಯ ಬೇರೆ. ಇದರಲ್ಲಿ, ಪಾತ್ರಧಾರಿ ಮತ್ತೆ ಪ್ರೇಕ್ಷಕ ಇಬ್ಬರನ್ನೂ ಸಹ ನಿಮ್ಮ ಎಂಟ್ರಿ ವಿಚಲಿತರನ್ನಾಗಿ ಮಾಡಿಬಿಡುತ್ತೆ! ಈಗ, ದುಡ್ಡಿನ ವಿಷಯಕ್ಕೇ ಬರೋಣ - ಒಂದು ನಾಟಕಕ್ಕೆ ಒಬ್ಬ ಪಾತ್ರಧಾರಿ ತನ್ನ ಸಾಕಷ್ಟು ಸಮಯವನ್ನ ಮೀಸಲಿಟ್ಟು, ಲೆಕ್ಕವಿಲ್ಲದಷ್ಟು ರಿಹರ್ಸಲ್ಸನ್ನ (ತಯಾರಿ) ಸಮಯಕ್ಕೆ ಸರಿಯಾಗಿ ಹಾಜರಾಗಿ ಮಾಡಿ, ಕೊನೆಗೆ ಬಂದು ರಂಗದ ಮೇಲೆ ನಿಂತು, ತನ್ನ ಪಾತ್ರದಲ್ಲಿ ತಲ್ಲೀನನಾಗಿ ಮಾಡ್ತಿರೋವಾಗ, ನಿಮ್ಮ ಅನಿರೀಕ್ಷಿತ ಆಗಮನ ಆತನನ್ನ ಪಾತ್ರದಿಂದ ಹೊರಗೆ ಬರೋ ಹಾಗೆ ಮಾಡಿಬಿಡಬಹುದು, ಆತನ ತಪಸ್ಸನ್ನ ವಿಘ್ನಗೊಳಿಸಿಬಿಡಬಹುದು! ಇನ್ನು ಪ್ರೇಕ್ಷಕರ ವಿಚಾರಕ್ಕೆ ಬಂದ್ರೆ, ಸ್ವಾಮಿ - "Better three hours too soon than a minute too late." ಎನ್ನುವಂತಹ ಶೇಕ್ಸ್‌ಪಿಯರ್‌ ನುಡಿಯನ್ನ ಪರಿಪಾಲಿಸಿ ಬಂದು ಕಾದು, (ಅಂದ ಹಾಗೆ ಎಲ್ಲರೂ ಸಹ ಅದೇ ಟ್ರ್ಯಾಫಿಕ್ ಅನ್ನ ಎದುರಿಸಿ, ಮೊದಲೇ ದುಡ್ಡು ಕೊಟ್ಟು ಟಿಕೆಟ್ ತಗೊಂಡು ಬಂದಂತವರು) ಸರಿಸುಮಾರು 250 ಜನ ಅಂತಿಟ್ಟುಕೊಳ್ಳೋಣ. ಅದರಿಂದ, ಶೋ ಶುರುವಾದ ನಂತರ, ಒಂದೊಂದು ನಿಮಿಷವೂ ಸಹ 250-300 ನಿಮಿಷಕ್ಕೆ ಸಮ. ಇನ್ನು ಎಲ್ಲರೂ ಪ್ರಯಾಣಿಸಿ ಬಂದು ಮತ್ತೆ ವಾಪಸ್ ಹೋಗೊ ಸಮಯ - ಒಬ್ಬರಿಗೆ 2 ಗಂಟೆ ಅಂತ ತೆಗೆದುಕೊಂಡರೆ, ಸರಿಸುಮಾರು 600 ಗಂಟೆ. ಇನ್ನು ಕಲಾವಿದರ ಮೀಸಲಿಟ್ಟ ಸಮಯ - ರಿಹರ್ಸಲ್ ಎಲ್ಲ ಸೇರಿ - ಒಬ್ಬ ಕಲಾವಿದನಿಗೆ ಸರಿಸುಮಾರು 1500 ಗಂಟೆಗಳಿಗಿಂತ ಹೆಚ್ಚು! ಇನ್ನು ನಾಟಕ ಬರೆದವರ ಸಮಯ, ನಿರ್ದೇಶಕ - ಆ ಮಟ್ಟಕ್ಕೆ ನಿರ್ದೇಶನ ಮಾಡೋದಕ್ಕೆ ಮೀಸಲಿಟ್ಟ ಸಮಯ, ಲೈಟಿಂಗ್ ಎಂಜಿನಿಯರ್, ಮ್ಯೂಸಿಕ್, ಬೇರೆ ಕೆಲಸಗಾರರು ಕಲಿತ ಕೆಲಸ, ಪ್ರೊಡಕ್ಷನ್, ರಂಗಮಂದಿರವನ್ನ ಕಟ್ಟಿ ಅನುವು ಮಾಡಿಕೊಟ್ಟವರ ಶ್ರಮ, ರಂಗ ತಂಡವನ್ನ ಕಟ್ಟಿ ಬೆಳೆಸಿದವರ ಶ್ರಮ ಮತ್ತು ಸಮಯ - ಹೀಗೆ ಹೇಳ್ತಾ ಹೋದ್ರೆ ಲೆಕ್ಕ ಮುಗಿಯದಷ್ಟು! ಇಂತಹ ಹಿನ್ನೆಲೆ ಇರುವಂತಹ ನಾಟಕದ ಪ್ರತಿಯೊಂದು ಸೆಕೆಂಡ್ ಸಹ ಬೆಲೆ ಕಟ್ಟಲಾಗದ್ದು! ಇದನ್ನ ಸಮಯಕ್ಕೆ ಸರಿಯಾಗಿ ಬರದೆ, ನಾವು ಬಿಡಲ್ಲ ಅಂದ್ರೆ, ನಮ್ಮ ಮೇಲೇನೆ ಶಾಪ ಹಾಕ್ತೀರಲ್ಲ? ಆ ದೇವ್ರೇ ನಿಮ್ಮನ್ನ ಕಾಪಾಡ್ಬೇಕು! ತಗೊಳ್ಳಿ ನಿಮ್ಮ ದುಡ್ಡು. ನಿಯಮಗಳ ಪ್ರಕಾರ ವಾಪಾಸ್ ಮಾಡೊ ಹಾಗಿಲ್ಲ, ಆದ್ರೂ ತಗೊಳ್ಳಿ.
(ಅಷ್ಟರಲ್ಲಿ ಯಾರೋ ಅಲ್ಲೊಬ್ಬರು ಉಪೇಂದ್ರ ಡೈಲಾಗ್ ಹೇಳ್ತಾ ಪಾಸ್ ಆಗ್ತಾರೆ - "ಎಲ್ಲಾರ್ ಕಾಲ್ ಎಳೀತದೆ ಕಾಲ, ಅದ್ರದ್ ಒಂದ್ ಟ್ರೈಲರ್ ನೋಡೊ, ಮುದುರ್ಕೊಂಡ್ ಬಾಲ").

=================================================================================
March 2 2017 for Beediyolagondu Maneya Maadi:

ತಿಮ್ಮ: ಈ ದೇವ್ರಿದ್ದಾನಾ? ಇದ್ರೆ, ಎಲ್ಲಿದ್ದಾನೆ? ಕಾಣಿಸ್ತಾನ? ಅವನ ರೂಪ ಆದ್ರೂ ಏನು?
ಗುಂಡ: ದೇವ್ರಿದ್ದಾನೆ, ದೇವ್ರು ಎಲ್ಲಾ ಕಡೇನೂ ಇದ್ದಾನೆ. ದೇವ್ರು ಕಣ್ಣಿಗೆ ಕಾಣಿಸ್ತಾನೆ, ಅವನಿಗೆ ಇಂಥದ್ದೇ ಅಂತ ರೂಪ ಇಲ್ಲ, ಆದ್ರೆ ಎಲ್ಲ ರೂಪದಲ್ಲೂ ಅವನಿದ್ದಾನೆ!
ತಿಮ್ಮ: ಹೌದ? ಈ ಕಂಬದಲ್ಲಿದ್ದಾನ ಅಂತ ಕೇಳ್ದ್ರೆ ಓಲ್ಡ್ ಸ್ಟೈಲ್ ಆಗ್ಬಿಡುತ್ತೆ... ಆ ಕಾರಲ್ಲಿದ್ದಾನ? ನಿನ್ನ ಬ್ಯಾಗಲ್ಲಿದ್ದಾನ? ಈ ಮೊಬೈಲ್ನಲ್ಲಿದ್ದಾನ? ಅಲ್ನೋಡು ಆ ಲೈಟಲ್ಲಿದ್ದಾನೆ? ಎಲ್ಲಿದ್ದಾನೆ, ಹೇಳು ಬೇಗ...
ಗುಂಡ: ದೇವ್ರನ್ನ ನೋಡ್ಬೇಕು ಅಂದ್ರೆ ಅಷ್ಟ್ ಬೇಗ ಎಲ್ಲ ತೋರ್ಸೊಕ್ಕಾಗೊಲ್ಲ. ಲಾಸ್ಟ್ನಲ್ಲಿ ಏನಂತ ಕೇಳ್ದೆ? ಆ ಲೈಟ...ಲ್ಲಿದ್ದಾನ ಅಂತ ಅಲ್ವ?
ತಿಮ್ಮ: ಹೌದು.
ಗುಂಡ: ಹಾಗಾದ್ರೆ ನಾಳೆ ಸಂಜೆ ರಂಗಶಂಕರಕ್ಕೆ ಬಾ ತೋರಿಸ್ತೀನಿ.


=================================================================================
March 11 2017:

ತಿಮ್ಮ: ಗುಂಡ, ಈಗ ಯಾರ್ಯಾರು ಯಾವ್ಯಾವ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದಾರೆ ಅಂತ ಏನಾದ್ರೂ ಗೊತ್ತಾ ಕಣ್ಲ?
ಗುಂಡ: ಏನ್ ತಿಮ್ಮ, ಇದ್ದಕ್ಕಿದ್ದ ಹಾಗೆ ಈ ಪ್ರಶ್ನೆ?
ಇರ್ಲಿ, ಹೇಳ್ತೀನಿ ಕೇಳು. Coincidence ಏನಪ್ಪ ಅಂದ್ರೆ ಎಲ್ಲರ ಹೆಸ್ರು 'ಅ' ಇಂದಾನೆ ಶುರುವಾಗುತ್ತೆ.
ಅಭಿಷೇಕ್ ಅಯ್ಯಂಗಾರ್ (Abhishek Iyengar)
- The only Indian to graduate in Theater from Double Edge Theatre, Boston. Also, his play Magadi Days was selected and played by Nataka Chaitra team in USA. All this happened in 2016-2017...
ತಿಮ್ಮ: ಸರಿ, ನನಗೆ ಸಿನೆಮಾ ಅಂದ್ರೆ ಭಾರಿ ಇಷ್ಟ, ಇತ್ತೀಚೆಗೆ trend ಆದ ಒಳ್ಳೆ ಸಿನೆಮಾ ಯಾವುದಾದ್ರು ಹೇಳು - ಈಗ್ಲೂ relevant ಆಗಿರ್ಬೇಕು... ಈಗ್ಲೇ ಹೇಳಿದ್ದೀನಿ!
ಗುಂಡ: #ಅಮರಾವತಿ - ಜನರ ಪ್ರೋತ್ಸಾಹ ಅಷ್ಟಾಗಿ ಸಿಗ್ಲಿಲ್ಲ, ಆದ್ರೆ ಮೊನ್ನೆ ತಾನೆ man hole ಒಳಗೆ ಇಳಿದು 3 ಜನ ಪೌರ ಕಾರ್ಮಿಕರು ಬೆಂಗ್ಳೂರಲ್ಲಿ ಸತ್ತರಲ್ಲ - ಎಲ್ಲಾ ಜನ ಇಂತಹ films ನೋಡಿ ತಿಳಿದುಕೊಂಡಿದ್ದಿದ್ರೆ ಈ ರೀತಿ ಅವಘಡಗಳ ಬಗ್ಗೆ ಏನಾದ್ರು ಯೋಚ್ನೆ ಮಾಡಿರೋರೇನೊ - ಆದ್ರೆ...
ಅಂದ್ಹಾಗೆ ಈ ಸಿನೆಮಾದ ಹಿನ್ನೆಲೆ ಸಂಗೀತ ಮಾತ್ರ ತುಂಬ ಚೆನ್ನಾಗಿತ್ತು ಕಣ್ಲ, ಮಾಡಿದೋರ್ಯಾರು ಅಂತೀಯ? ಅದೇ 'ಅ' ಇಂದ ಹೆಸ್ರು ಶುರುವಾಗೊ - ಅಭಿಲಾಶ್ ಅಂತ ಮತ್ತೆ ಇನ್ನೊಬ್ಬರು...
ತಿಮ್ಮ: ಈಗ ನಂಗೆ quick ಆಗಿ answers ಬೇಕು, ಗುಂಡ - ಹೇಳು - ಈಗಿನ ಜನಪ್ರಿಯ ಹಾಡು.
ಗುಂಡ: ಅಲ್ಲಾಡ್ಸು, ಅಲ್ಲಾಡ್ಸು - ಚೌಕ
ತಿಮ್ಮ: ಸರಿ, ಸಿನೆಮಾ ಸಾಕು, ನಿನ್ನ ಮೆಚ್ಚಿನ ಕನ್ನಡ ಆಶುವಿಸ್ತರಣ (Improviser) ನಟ?
ಗುಂಡ: ಅಂಗಡಿ HampaKumar Angadi
ತಿಮ್ಮ: ಗುಂಡ - ನೀನು ಈ ರೀತಿ answers ಕೊಡ್ತಾ ಇರೋದ್ ನೋಡಿದ್ರೆ, ಏನೊ ಹೇಳಕ್ try ಮಾಡೋ ಹಂಗಿದೆ, ಇದು ನಿಂಗೆ last question - ನಿನ್ನ ಮೆಚ್ಚಿನ English improviser ಯಾರು?
ಗುಂಡ: ಅಭಿಷೇಕ್ ದೇಸಾಯ್ (Abhishek Desai) - ಏನಿಲ್ಲ ಕಣ್ಲ - ಇವರ್ದು ಒಂದು improve war (between Improv comedy Mumbai and Improv comedy Bangalore) ಇವತ್ತು ವಸಂತನಗರದ ಅಲಯನ್ಸ್ ಫ್ರಾಂಚೈಸ್ - ಡಿ - ಬೆಂಗಳೂರು ಸಭಾಂಗಣದಲ್ಲಿ ನಡೀತ ಇದೆ. ನಿನ್ನನ್ನೂ ಕೂಡ ಕರೆಯೋಣ ಅಂತ ಈ 'ಅ' ಅಕ್ಷರದ ಆಟ. ಇದು ಇವರ ಚಿಕಾಗೊ ಪ್ರವಾಸಕ್ಕೆ ನಮ್ಮ ಕಡೆಯಿಂದ ಮಾಡೊ ಒಂದು ಸಣ್ಣ ಸಹಾಯ ಅಷ್ಟೆ.
=================================================================================
March 18 2017:

ತಿಮ್ಮ: ಬೀದಿ ನಾಟಕಗಳ ಮಹತ್ವ ಏನು ಅಂತ ತಿಳೀಬೇಕಂದ್ರೆ ಈಗ ತತ್ಕ್ಷಣ ಏನ್ಮಾಡ್ಬೋದ್ಹೇಳು, ಗುಂಡ?
ಗುಂಡ: ಹೋಗಿ 'ಶುದ್ಧಿ' ಫಿಲ್ಮ್ ನೋಡು.

=================================================================================
April 3rd 2017:

ತಿಮ್ಮ: ಇಂಕ್ / ಶಾಯಿಯಲ್ಲಿ ಎಷ್ಟು ವಿಧ ಮತ್ತು ಅವು ಯಾವುವು?
ಗುಂಡ: ಇಂಕ್ನಲ್ಲಿ ಎರಡು ವಿಧ, ಒಂದು ಬರೆಯುವ ಇಂಕು ಮತ್ತೊಂದು ಇತ್ತೀಚೆಗೆ ಗೊತ್ತಾಗಿದ್ದು, ಮನುಷ್ಯನಿಗೆ ಹಾಕುವ ಇಂಕು!
ತಿಮ್ಮ: ಮೊದಲನೇದು ಎಲ್ರೂ ಉಪಯೋಗಿಸ್ತಾರೆ, ಎರಡನೇದ್ರಲ್ಲೆ ಎರಡು ವಿಧ ಇದೆ - ಒಂದು - ನಮಗೆ ಬೇಕಿದ್ದರೂ, ಬೇಡದಿದ್ದರೂ ಮತಗಟ್ಟೆಗೆ ಹೋದಾಗ ಹಚ್ಚುವ ಮತದಾನದ ಇಂಕು, ಎರಡನೇದು ರಾಜಕಾರಣಿಗಳು ಸರಿಯಾಗಿ ಕೆಲಸ ಮಾಡ್ಲಿಲ್ಲ ಅಂದ್ರೆ ಅವರ ಮೇಲೆ ಅದೇ ಮತದಾರ ಹೋಗಿ ಎರಚೋ ಇಂಕು!
=================================================================================
4th April 2017:

ತಿಮ್ಮ: ಈ ರಾಜ್ಯದಲ್ಲಿ ಎಷ್ಟೇ ಮುಖ್ಯಮಂತ್ರಿಗಳು ಬರ್ಲಿ, ಹೋಗ್ಲಿ, ಯಾವಾಗ್ಲೂ ಮುಖ್ಯಮಂತ್ರಿ ಸ್ಥಾನದಲ್ಲೇ ಇರೋ ಇಬ್ಬರ ಹೆಸರು ಹೇಳು, ಗುಂಡ ನೋಡೋಣ.
ಗುಂಡ: ಒಂದು, ಮುಖ್ಯಮಂತ್ರಿ ಚಂದ್ರು. ಎರಡು, ನಮ್ಮ ಮಾಗಡಿ ಡೇಸ್ ಮುಖ್ಯಮಂತ್ರಿ ಅನಂತ್ ಕೃಷ್ಣ!
 
=================================================================================
9th April 2017:
 
ತಿಮ್ಮ: ಈಗಿನ ನ್ಯೂಸ್ ರಿಪೋರ್ಟಿಂಗ್ ನೋಡಿ inspire ಆದ ಮುಂದಿನ ಜನರೇಷನ್ ರಿಪೋರ್ಟರ್ಗಳು ಹೇಗೆ ನ್ಯೂಸ್ ರಿಪೋರ್ಟ್ ಮಾಡಬಹುದು ಅಂತ ಹೇಳ್ತೀಯ?
ಗುಂಡ:
ರಮೇಶ (ರಿಪೋರ್ಟರ್): ಬೆಳಿಗ್ಗೆ 9 ಗಂಟೆಗೆ ತಮ್ಮ ಕೆಂಪು ಅಲಾರ್ಮ್ ಮೇಲೆ ಕೈ ಒತ್ತಿದ್ದ ನಮ್ಮ ಮುಖ್ಯಮಂತ್ರಿಗಳ ಅಸಿಸ್ಟೆಂಟ್ ಮತ್ತೆ ನಿದ್ದೆಗೆ ಜಾರಿದ್ದರು, ಆಮೇಲೆ 9:35:43 ಕ್ಕೆ ಸರಿಯಾಗಿ ಮತ್ತೆ ಸರಿಯಾಗಿ ಎದ್ದಾಗ, ಬರಿ ಬನಿಯನ್ ಮತ್ತೆ ಚಡ್ಡಿ ಮಾತ್ರ ಹಾಕಿದ್ರಂತೆ, ಆಮೇಲೆ ಟಾಯ್ಲೆಟ್ ಮುಗಿಸಿ, ಸ್ನಾನ ಮಾಡಿ, ತಮ್ಮ ಮಕ್ಕಳಿಗೂ ಎಬ್ಬಿಸಿ ಸ್ನಾನ ಮಾಡಿಸಿ, ಆಮೇಲೆ ಇವ್ರು ಬಿಳಿ ಷರ್ಟು, ಕರಿ ಪ್ಯಾಂಟು ಹಾಕ್ಕೊಂಡು, ತಿಂಡಿಗೆ ಉಪ್ಪಿಟ್ಟಿಗೆ... ಉಪ್ಪು ಜಾಸ್ತಿ ಆಗಿದ್ರಿಂದ, ಖಾರಬಾತ್ ಹಾಕಿಸ್ಕೊಂಡ್ರಂತೆ (ವೀಕ್ಷಕ: ಖಾರಬಾತ್, ಉಪ್ಪಿಟ್ಟು ಎರಡೂ ಒಂದೇ ಅಲ್ವ, ಅಂತ ತಲೆ ಕೆಡಿಸ್ಕೊಳ್ತಾ ಇರ್ಬೇಕಾದ್ರೆ...), ಖಾರಬಾತ್ಗೆ ಖಾರ ಕಮ್ಮಿ ಆಗಿಂದ್ರಿಂದ ಇಡ್ಲಿ, ಸಾಂಬಾರ್ ಹಾಕಿಸ್ಕೊಂಡ್ರಂತೆ, ರಮೇಶ್(ನ್ಯೂಸ್ ಆ್ಯಂಕರ್).
ರಮೇಶ್: ಸುರೇಶ್, ಸಾಂಬಾರಿಗೆ ಉಪ್ಪು, ಖಾರ ಕರೆಕ್ಟಾಗಿ ಹಾಕಿಂದ್ರಂತ? ಅದನ್ನ ತಿಳಿದ್ಕೊಂಡ್ರ?
ಸುರೇಶ್: ಹಾಕಿದ್ರಂತೆ, ರಮೇಶ್ ಆದ್ರೆ ಇಡ್ಲಿಗೆ ಸೋಡ ಸ್ವಲ್ಪ ಜಾಸ್ತಿ ಆಗಿತ್ತಂತೆ, ರಮೇಶ್.
ರಮೇಶ್: ತುಂಬ ಇಂಟರಸ್ಟ್ ಆಗಿದೆ, ಆಮೇಲೇನಾಯ್ತು ಹೇಳಿ, ಸುರೇಶ್.
ಸುರೇಶ್: ಆಮೇಲೆ, ಟೀ ಕುಡಿಯೋವಾಗ ನಾಲಿಗೆ ಸ್ವಲ್ಪ ಸುಟ್ಕೊಂಡ್ರಂತೆ, ರಮೇಶ್.
ರಮೇಶ್: ಅಲ್ಲಾರಿ ಸುರೇಶ್, CM assistentಗೆನೆ ನಾಲಿಗೆ ಸುಡೋ ಹಾಗೆ ಕೊಡೋ ಕೆಲಸಗಾರರಿಗೆ ಏನು ಹೇಳೋದು.
ಸುರೇಶ್: ಹೌದು, ರಮೇಶ್. ಆಮೇಲೆ ತಮ್ಮ iPhone420 ನ ಜೇಬಲ್ಲಿ ಇಟ್ಕೊಂಡು, CMನ ಎಬ್ಬಿಸೋಕೆ, ಈಗ ತಾನೆ ತಮ್ಮ BMW ಕಾರ್ ಮೇಲೆ ಕಾಗೆ ಕೂತಿದ್ದಿದ್ದತಿಂದ ಅದನ್ನ ಬಿಟ್ಟು ತಮ್ಮ Hummer carನಲ್ಲಿ ಜ್ಯೋತಿಷಿ ಅಂಡಾಂಡ-ಪಿಂಡಾಂಡ ಅವರ ಹತ್ತಿರ ಹೋದ್ರಂತೆ, ರಮೇಶ್.
ರಮೇಶ್: ತುಂಬಾ ಚೆನ್ನಾಗಿ ಬರ್ತಾ ಇದೆ, ಸುರೇಶ್ ಹಾಗೆ ಕವರ್ ಮಾಡ್ತಾ ಇರಿ. ವೀಕ್ಷಕರೆ, ಈಗ ಒಂದು ಸಣ್ಣ ಬ್ರೇಕ್ ತಗೊಳ್ಳಿ, ಇಷ್ಟರಲ್ಲೇ ಬರ್ತೀವಿ.
(ಸುರೇಶ್ ತಮ್ಮ ಲ್ಲಿ ಮೊಬೈಲ್ಗೆ ಸತತವಾಗಿ ಕಾಲ್ ಮಾಡ್ತಾ ಇರೋ, ತಿಮ್ಮೇಶ್ ಕಾಲ್ ರೆಸೀವ್ ಮಾಡ್ತಾರೆ - ತಿಮ್ಮೇಶ್ : ಸರ್, ಇಲ್ಲಿ ಉತ್ತರ ಕರ್ನಾಟಕದಲ್ಲಿ ಪರಿಸ್ಥಿತಿ ತುಂಬಾ ಕೆಟ್ಟಿದೆ, ಬರದಿಂದ, ದಿನಕ್ಕೆ ಲೆಕ್ಕವಿಲ್ಲದಷ್ಟು ರೈತರು ಸಾಯ್ತಾ ಇದ್ದಾರೆ, ದಯವಿಟ್ಟು ಒಂದ್ಸಲ ಲೈವ್ ಟೆಲಿಕಾಸ್ಟ್ಗೆ ಅವಕಾಶ ಮಾಡಿಕೊಡಿ, ಸರ್‌.
ಸುರೇಶ್: ದಿನಾ ಸಾಯೋರ್ಗೆ ಅಳೋರ್ಯಾರು? ತಿಮ್ಮೇಶ್, ನೀವಿನ್ನೂ fresher, ಇಲ್ಲಿ ಯಾವುದಕ್ಕೆ TRP ಬರುತ್ತೆ, ಅಂತ ಜಡ್ಜ್ ಮಾಡಿ ನ್ಯೂಸ್ ಕೊಡೋ ನಮ್ಮ ಪರಿಸ್ಥಿತಿ ನಿಮ್ಗೆಲ್ರೀ ಗೊತ್ತಾಗುತ್ತೆ. ಸರಿ, ರಾತ್ರಿ 11 ಗಂಟೆಗೆ ಪುಟ್ಟ ಗೌರಿ re-telecast ಆದ್ಮೇಲೆ, ಗುಪ್ತಾಂಗ ಸಮಸ್ಯೆಗಳ program ಬರುತ್ತೆ, ಅದಾದ್ಮೇಲೆ ಅವಕಾಶ ಸಿಕ್ಕಿದ್ರೆ, ನಿಮ್ಮ ರಿಪೋರ್ಟ್ ಹಾಕೋಕೆ managementಗೆ ಹೇಳಿ ಒಪ್ಪಿಸ್ತೀನಿ, ಆವಾಗ ಇರೋ fresher ಭಾರತಿ ನಿಮ್ಮ report ಹಾಕ್ತಾರೆ, ಆಯ್ತಾ. [ಅಂತ ಹೇಳಿ call ಕಟ್ ಮಾಡ್ತಾರೆ, ಸುರೇಶ್])
ತಿಮ್ಮ: ಗುಂಡ, ಸಾಕು ನಿಲ್ಸಪ್ಪ, ಕೇಳ್ತಾ ಇದ್ರೆ ತಲೆ ಚಿಟ್ಟು ಹಿಡಿಯುತ್ತೆ. ಈ ರಿಪೋರ್ಟರ್ಸ್ ಹೋಗಿ CM ಏನ್ ಹೇಳಿಕೆ ಕೊಟ್ರು ಅಂತ ತಿಳ್ಕೊಳ್ಳೋಕೆ ಸಾಯಂಕಾಲ ಆಗುತ್ತೆ. ಸರಿ, ಮಾಗಡಿ ಡೇಸ್ ನಾಟಕದಲ್ಲಿ ಬರೋ ರಿಪೋರ್ಟರ್ಸ್ ಇದೇ ಥರಾನ?
ಗುಂಡ: ಇಲ್ಲ, ತಿಮ್ಮ. ಅವ್ರು ಈಗಿನ ಕಾಲದ ರಿಪೋರ್ಟರ್ಸ್!
=================================================================================
9th April 2017:
 
(ತಿಮ್ಮ ಒಬ್ಬ ರಿಪೋರ್ಟರ್ ಆಗಿ, ಗುಂಡನ ಇಂಟರ್ವ್ಯೂ ಮಾಡೋಕೆ ಬಂದಿದ್ದಾನೆ. ಗುಂಡ ಒಬ್ಬ ಸಾಮಾನ್ಯ ಪ್ರಜೆ!)
ತಿಮ್ಮ: ನೀವು ಮೂಲತಃ ಎಂತಹ ವ್ಯಕ್ತಿ?
ಗುಂಡ: ಕಿರಿಕ್ ಪಾರ್ಟಿ.
ತಿಮ್ಮ: (ಇವನ ಹತ್ರ ಹುಷಾರಾಗ್ ಮಾತಾಡ್ಬೇಕು) ನಿಮ್ಮ ಚಹರೆಯ ಬಗ್ಗೆ ಜನ ಕೇಳ್ತಾರೆ, ಹೇಳ್ತೀರ?
ಗುಂಡ: ಗೋಧಿ ಬಣ್ಣ ಸಾಧಾರಣ ಮೈಕಟ್ಟು....
ತಿಮ್ಮ: (ಏನು ಎಲ್ಲ ಸಿನೆಮಾಗಳ ಹೆಸ್ರು ಹೇಳ್ತಾ ಇದ್ದಾನಲ್ಲ, ಇವನ ಹತ್ರ ಹೆಂಗೆ ಡೈರೆಕ್ಟ್ ಉತ್ತರ ತಗೊಳ್ಳೋದು...) ನಿಮ್ಮ ನೆಚ್ಚಿನ ಪುಸ್ತಕ?
ಗುಂಡ: ಮಾಗಡಿ ಡೇಸ್.
ತಿಮ್ಮ: ಲೇಯ್ GBSM ಕಿರಿಕ್ ಪಾರ್ಟಿ, ಆಗ್ಲಿಂದ ಒಂದು ಪ್ರಶ್ನೆಗಾದ್ರೂ ಕರೆಕ್ಟಾಗಿ ಉತ್ತರ ಕೊಟ್ಟಿದ್ದೀಯೇನ್ಲಾ ನೀನು? ಲೇಯ್ ಗೂಬಾಲ್ಡ್, 'ಮಾಗಡಿ ಡೇಸ್' - ಅಭಿಷೇಕ್ ಅಯ್ಯಂಗಾರ್ ಬರೆದಿರೋ ನಾಟಕ, ಮಾಲ್ಗುಡಿ ಡೇಸ್ - ಒಂದು ಬುಕ್ ಹೆಸ್ರು. ಅಷ್ಟೂ ಗೊತ್ತಾಗ್ಲಿಲ್ಲ ಅಂದ್ರೆ...
ಗುಂಡ: ತಿಮ್ಮ, ಸಾಕ್ ನಿಲ್ಸೊ, ಮೇಲೆ ಹೇಳಿದ್ದೆಲ್ಲ ಪ್ರಪಂಚದ ಮೂಲೆ ಮೂಲೆಯಲ್ಲಿರೋ, ಸಿನೆಮಾ ಮತ್ತೆ ರಂಗಭೂಮಿ follow ಮಾಡ್ತಿರೋ ಕನ್ನಡಿಗರಿಗೆಲ್ಲ ಈಗಾಗ್ಲೇ ಚಿರಪರಿಚಿತ ಆಗಿರೋ ಹೆಸರುಗಳು, ಏನೋ ಸುಮ್ನೆ ನಿನ್ ಕಾಲೆಳೆಯೋಣ ಅಂತ ಆಟ ಆಡ್ಸಿದೆ. ನಾಡಿದ್ದು ನಿನ್ನ friendsನೆಲ್ಲಾ ಕರ್ಕೊಂಡು ರಂಗಶಂಕರಕ್ಕೆ, ಸಾಯಂಕಾಲ 7:30ಗೆ ಬಂದ್ಬಿಡು.
=================================================================================
 
15th April 2017:
 
Thimma: Gunda, I want to converse with you in English today...
Gunda: Oh, So you have seen an English play and want to tell about that today. OK, go ahead.
Thimma: What a play man, today at Rangashankara! I seen Merchant of Venice (ವೆನಿಸ್ಸಿನ ವ್ಯಾಪಾರಿ) in Kannada earlier in Mysore before with new entrants to theater that was by Rangayana group before. That had number of characters in the play. I was impressed by that play. Today, what I seen was a magic on the stage only by 2 ...characters on the stage carrying the entire message.
Gunda: Yes, "Shylock" designed, devised and directed by Surendranath was a wonder watch. Bangalore is "the place for theater" with very good experiments on the characters and the content created by 'William Shakespeare', that we can experience through this play. There are more shows tomorrow at Rangashankara, which I feel people should not miss.
=================================================================================
3rd May 2017:

ಬಾಹುಬಲಿ - ಅನಾವರಣ

'ಬಾಹುಬಲಿ - ಪ್ರಾರಂಭ' ಚಿತ್ರ ಬಂದಾಗ
ನನ್ನ ನೆನಪಿಗೆ ಬಂದಿದ್ದು
ಶ್ರವಣಬೆಳಗೊಳದ ಬಾಹುಬಲಿ ...
ಅರ್ಥಾತ್ ಗೊಮ್ಮಟೇಶ್ವರ!

ಚಿತ್ರ ನೋಡಿದ ನಂತರ ಆಗಿದ್ದು,
ಮಹಿಷ್ಪತಿ ಎಂಬ ಕಾಲ್ಪನಿಕ ಸಾಮ್ರಾಜ್ಯದ ದೊರೆ,
ಮಹೇಂದ್ರ ಬಾಹುಬಲಿಯ ಅನಾವರಣ!
ಮತ್ತೆ ಹುಟ್ಟಿದ್ದು ರಾಜನಿಷ್ಠ ಕಟ್ಟಪ್ಪ,
ಅಮರೇಂದ್ರ ಬಾಹುಬಲಿಯನ್ನೇಕೆ ಕೊಂದ
ಎಂಬ ಪ್ರಶ್ನೆ!
'ಬಾಹುಬಲಿ - ಅಂತ್ಯ'ದ ಬರುವಿಕೆಗೆ ಕೆಲವು ದಿನಗಳ ಮುಂಚೆ ಬಂದಿದ್ದು,
ಚಿತ್ರ ವೀಕ್ಷಣೆಯ ವೆಚ್ಚವ
ಕಡಿಮೆಗೊಳಿಸಲಾಗುವುದು ಎಂಬ ಸುದ್ದಿ!
ಆದರೆ, ಕಟ್ಟಪ್ಪ ಬಾಹುಬಲಿಯನ್ನೇಕೆ ಕೊಂದ ಎಂದು ತಿಳಿಯಲು ಚಿತ್ರ ವೀಕ್ಷಣೆಗೆ ತೆರಳಿದಾಗ
ಅನಾವರಣವಾಗಿದ್ದು, ಹಿಂದೆಂದೂ
ಊಹಿಸದಷ್ಟು, ದುಪ್ಪಟ್ಟು, ವರ್ಗಕ್ಕೆ ತಕ್ಕಂತೆ, ಸಮಯಕ್ಕೆ ತಕ್ಕಂತೆ, ಏರಿಳಿತವಿರುವ ದರ!
ನಮ್ಮ ಅನಾವರಣ ನಾಟಕದ್ದು,
ಎರಡೂ ಸಮಯಗಳಲ್ಲಿ, ಎರಡೂ ಪ್ರದರ್ಶನಗಳಲ್ಲಿ, ಒಂದೇ ವರ್ಗ,
ಒಂದೇ ದರ!
ಬಾಹುಬಲಿಯ ಮೂರನೇ ಒಂದು ಭಾಗದ ಸಮಯದಲ್ಲೇ, ದೊಡ್ಡ ವರ್ಗದ ಹದಿನಾಲ್ಕನೇ ಒಂದು ಭಾಗದ ದರದಲ್ಲಿ (Reference: Gold class rate was: 1400Rs on last Sunday evening) ,
ದುಪ್ಪಟ್ಟು ಮನರಂಜನೆ ನೀಡುವ,
ಏಕೈಕ ND ಮಾಧ್ಯಮದಲ್ಲಿರುವ,
ನೇರ ಪ್ರದರ್ಶನದ ನಾಟಕವೇ,
ನಮ್ಮ ಅನಾವರಣ!
-------------------
ಪದ ವಿವರಣೆ:
ND - 2D, 3D, 7D ಇದ್ದ ಹಾಗೆ, ND ಅಂದರೆ 'N - Dimension'
 
=================================================================================