ನೆಡಬಾರದೇಕೊಂದು ಗಿಡವ?
ಮದುವೆಯಾದಾಗಲೊಂದು, ಮಗುವಾದಾಗಲೊಂದು,
ಮತ್ತೊಂದು, ಮಗುದೊಂದು,
ನೆಡಬಾರದೇಕೊಂದು ಗಿಡವ?
ನಮ್ಮ ಪೂರ್ವಜರು ಹೇಳಿಕೊಟ್ಟರು,
ಗಣಗಲು ಗಿಡ ನೆಡಲು ಸಮಾಧಿಯ ಮೇಲೆ,
ಇಡಲು ಮನೆಯ ಮುಂದೊಂದು ತುಳಸಿಯ ಬೃಂದಾವನವ,
ನಾವದನು ಉಳಿಸಬಾರದೇಕೆ? ಬೆಳೆಸಬಾರದೇಕೆ? ||ನೆಡಬಾರದೇಕೊಂದು||
ಸ್ಮರಿಸಬಾರದೇಕೆ ಸಾಲು ಮರದ ತಿಮ್ಮಕ್ಕನ ಆದರ್ಶ?
ಮಾಡಬಾರದೇಕಿಂತೊಂದು ಕ್ರಾಂತಿಯ? ಹಸಿರು ಕ್ರಾಂತಿಯ?
ಫಲ ನೀಡದಿದ್ದರೇನಂತೆ ಕೋಪನ್ಹೇಗನ್ ಸಮ್ಮೇಳನವು,
ಮೊದಲಾಗಬಾರದೇಕಿದಕೆ?, ಈ ಪೃಥ್ವಿಯ ಉಳಿಸಲಿಕ್ಕೆ! ||ನೆಡಬಾರದೇಕೊಂದು||
ಶಾಸನವಾಗಿಸಬಾರದೇಕಿದನು,
ಉಳ್ಳವರಿಗೆ, ಭುವಿಯುಳ್ಳವರಿಗೆ?
ಪ್ರೋತ್ಸಾಹಿಸಬಾರದೇಕಿದನು,
ಎಲ್ಲರಿಗೆ, ಈ ಭುವಿಯೊಳೆಲ್ಲರಿಗೆ? ||ನೆಡಬಾರದೇಕೊಂದು||
No comments:
Post a Comment