Saturday, December 11, 2010

ಚಿರಂಜೀವಿ

ಚಿರನಿದ್ರೆಗೆ ಜಾರಿದರೂ, ಚಿರಂಜೀವಿಯಾದವರು,
ಯಾರವರು? ಯಾರವರು?
ಕಂಠಸಿರಿಯಿಂದ, ಕಲಾ ನೈಪುಣ್ಯತೆಯಿಂದ,
ಕರ್ಣ ಕಣ್ಗಳಿಗಿoಪನು ನೀಡಿ, ಮನಸೂರೆಗೈದವರು,
ಯಾರವರು? ಯಾರವರು?

ಒಬ್ಬರೋ ಸಿಂಹ ನಡಿಗೆಯವರು, ಕೋಟಿಗೊಬ್ಬರು ಇವರು,
ಸಾಹಸಸಿಂಹರೆನಿಸಿಕೊಂಡವರು, ಕೋಗಿಲೆ ಕಂಠದವರು,
ಅಜಾತಶತ್ರುವಾಗಿ, ಆಪ್ತ ಮಿತ್ರ, ಆಪ್ತರಕ್ಷಕರಾದವರು,
ಅವರೇ ನಮ್ಮ ಶ್ರೀ ವಿಷ್ನುವರ್ಧನರು ||ಚಿರನಿದ್ರೆಗೆ ಜಾರಿದರೂ||

ಇನ್ನೊಬ್ಬರೋ ನಟನಾ ಸಾಮ್ರಾಟರು, ಹೃದಯಶ್ರೀಮಂತರು,
ಸಜ್ಜನ ಸ್ವರೂಪಿಗಳು, ನಿರ್ಮಲ ನುಡಿಯವರು,
ಶಾಂತ ಸ್ವಭಾವದವರು, ಚಾಮಯ್ಯ ಮಾಸ್ತರರಾದವರು,
ಅವರೇ ನಮ್ಮ ಶ್ರೀ ಕೆ. ಎಸ್. ಅಶ್ವತ್ಥರವರು ||ಚಿರನಿದ್ರೆಗೆ ಜಾರಿದರೂ||

ಮತ್ತೊಬ್ಬರೋ, ಕಂಚಿನಾ ಕಂಠದವರು, ಸಂಗೀತ ಸಾಮ್ರಾಟರು,
ನವ ಯುಗದ ಶಿಶುನಾಳರೆನಿಸಿಕೊಂಡವರು,
ಗಾನಗಂಗೆಗೆ ರಾಗ ದಂಡೆಯ ತೋರಿ, ಸಂಗೀತ ಸಾಗರಕೆ ಅರ್ಪಿಸಿದವರು,
ಅವರೇ ನಮ್ಮ ಶ್ರೀ ಸಿ. ಅಶ್ವತ್ಥರವರು ||ಚಿರನಿದ್ರೆಗೆ ಜಾರಿದರೂ||

No comments:

Post a Comment