ಭಾವನೆ ಬದಲಾದರೆ ವ್ಯಕ್ತಿತ್ವ ಬೆಳೆದು, ವ್ಯಕ್ತಿ ಬದಲಾಗುತ್ತಾನೆ. ವ್ಯಕ್ತಿ ಬದಲಾದರೆ ಅವನ ಕುಟುಂಬ ಬದಲಾಗುತ್ತದೆ. ಕುಟುಂಬದಿಂದ ಸಮಾಜ, ಸಮಾಜದಿಂದ ದೇಶ ಮತ್ತು ದೇಶದಿಂದ ಇಡೀ ಪ್ರಪಂಚ ಬದಲಾಗಿ ಶಾಂತಿ ನೆಲೆಸುತ್ತದೆ. ಭಾವನೆಗಳನ್ನು ಬದಲಾಯಿಸುವ ಒಂದು ಸಣ್ಣ ಪ್ರಯತ್ನ ಇಲ್ಲಿದೆ. ಅದರ ಫಲ, ನಮ್ಮ ಕಾರ್ಯ ಪ್ರವ್ರುತ್ತತೆಯಲ್ಲಿದೆ. ಪ್ರತಿಫಲ, ಮುಂದಿನ ಪೀಳಿಗೆಗೆ ಸಿಗುವುದೆಂಬ ಆತ್ಮ ವಿಶ್ವಾಸ ನಮ್ಮದಾಗಲಿ.
Monday, December 20, 2010
Saturday, December 11, 2010
ಚಿರಂಜೀವಿ
ಚಿರನಿದ್ರೆಗೆ ಜಾರಿದರೂ, ಚಿರಂಜೀವಿಯಾದವರು,
ಯಾರವರು? ಯಾರವರು?
ಕಂಠಸಿರಿಯಿಂದ, ಕಲಾ ನೈಪುಣ್ಯತೆಯಿಂದ,
ಕರ್ಣ ಕಣ್ಗಳಿಗಿoಪನು ನೀಡಿ, ಮನಸೂರೆಗೈದವರು,
ಯಾರವರು? ಯಾರವರು?
ಒಬ್ಬರೋ ಸಿಂಹ ನಡಿಗೆಯವರು, ಕೋಟಿಗೊಬ್ಬರು ಇವರು,
ಸಾಹಸಸಿಂಹರೆನಿಸಿಕೊಂಡವರು, ಕೋಗಿಲೆ ಕಂಠದವರು,
ಅಜಾತಶತ್ರುವಾಗಿ, ಆಪ್ತ ಮಿತ್ರ, ಆಪ್ತರಕ್ಷಕರಾದವರು,
ಅವರೇ ನಮ್ಮ ಶ್ರೀ ವಿಷ್ನುವರ್ಧನರು ||ಚಿರನಿದ್ರೆಗೆ ಜಾರಿದರೂ||
ಇನ್ನೊಬ್ಬರೋ ನಟನಾ ಸಾಮ್ರಾಟರು, ಹೃದಯಶ್ರೀಮಂತರು,
ಸಜ್ಜನ ಸ್ವರೂಪಿಗಳು, ನಿರ್ಮಲ ನುಡಿಯವರು,
ಶಾಂತ ಸ್ವಭಾವದವರು, ಚಾಮಯ್ಯ ಮಾಸ್ತರರಾದವರು,
ಅವರೇ ನಮ್ಮ ಶ್ರೀ ಕೆ. ಎಸ್. ಅಶ್ವತ್ಥರವರು ||ಚಿರನಿದ್ರೆಗೆ ಜಾರಿದರೂ||
ಮತ್ತೊಬ್ಬರೋ, ಕಂಚಿನಾ ಕಂಠದವರು, ಸಂಗೀತ ಸಾಮ್ರಾಟರು,
ನವ ಯುಗದ ಶಿಶುನಾಳರೆನಿಸಿಕೊಂಡವರು,
ಗಾನಗಂಗೆಗೆ ರಾಗ ದಂಡೆಯ ತೋರಿ, ಸಂಗೀತ ಸಾಗರಕೆ ಅರ್ಪಿಸಿದವರು,
ಅವರೇ ನಮ್ಮ ಶ್ರೀ ಸಿ. ಅಶ್ವತ್ಥರವರು ||ಚಿರನಿದ್ರೆಗೆ ಜಾರಿದರೂ||

Subscribe to:
Comments (Atom)